ಕೂಡ್ಲಿಗಿ, ನ. 28 (DaijiworldNews/HR): ಬಳ್ಳಾರಿಯನ್ನು ವಿಭಜಿಸಿ ನೂತನ ವಿಜಯನಗರ ಜಿಲ್ಲೆ ರಚನೆ ಆಗದಿದ್ದರೆ ರಾಜಕೀಯ ನಿವೃತ್ತಿ ಪಡೆಯುವ ತೀರ್ಮಾನ ಮಾಡಿದ್ದೆ ಎಂದು ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಒಂದು ಜಿಲ್ಲೆ ರಚನೆ ಮಾಡುವುದು ಸುಲಭವಲ್ಲ. ಆದರೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನಸ್ಸು ಮಾಡಿದ ಪರಿಣಾಮ ನೂತನ ಜಿಲ್ಲೆ ರಚನೆ ಆಗಿದೆ" ಎಂದರು.
ಇನ್ನು ಜಿಲ್ಲೆ ನಿರ್ಮಾಣವಾಗದಿದ್ದರೆ ನನ್ನ ರಾಜಕೀಯ ಜೀವನ ಅಲ್ಲಿಗೆ ನಿಂತು ಹೋಗುತ್ತಿತ್ತು. ಜನತೆ ಮತ ನೀಡುವಾಗ ಕೊಟ್ಟ ಭರವಸೆಯನ್ನು ನಾನು ಈಡೇರಿಸದಿದ್ದರೆ ಹೇಗೆ ಎಂಬುದು ನನ್ನನ್ನು ಕಾಡುತ್ತಿತ್ತು. ಇದಕ್ಕೆ ಯಡಿಯೂರಪ್ಪ ಅವರು ಅವಕಾಶ ನೀಡಲಿಲ್ಲ" ಎಂದಿದ್ದಾರೆ.
ಹಳ್ಳಿಯಲ್ಲೂ ಬಿಜೆಪಿ ಬಾವುಟ ಹಾರಿಸಬೇಕು ಎಂಬುದು ರಾಷ್ಟ್ರೀಯ ನಾಯಕರ ಕನಸು. ಕೇವಲ ಅಧಿಕಾರಕ್ಕೆ ಬರಬೇಕು ಎಂಬುದು ಬಿಜೆಪಿಯ ಉದ್ದೇಶವಲ್ಲ" ಎಂದು ಹೇಳಿದ್ದಾರೆ.