ಹರಿದ್ವಾರ, ನ.28 (DaijiworldNews/PY): "ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ತಕ್ಷಣ ರೈತರು ಆಂದೋಲನವನ್ನು ಕೊನೆಗೊಳಿಸಬೇಕು" ಎಂದು ಯೋಗ ಗುರು ಬಾಬಾ ರಾಮ್ದೇವ್ ತಿಳಿಸಿದ್ದಾರೆ.
"ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ಧಾರೆ. ಪ್ರಧಾನಿ ಮೋದಿ ಅವರ ಉದ್ದೇಶ ಉತ್ತಮವಾಗಿದೆ ಎಂದು ನಾನು ನಂಬುತ್ತೇನೆ. ದೇಶಕ್ಕೆ ಮೋದಿ ಅವರು ಉತ್ತಮ ನಾಯಕತ್ವ ನೀಡುತ್ತಿದ್ದಾರೆ" ಎಂದಿದ್ದಾರೆ.
"ಎಂಎಸ್ಪಿ ಗಂಭೀರವಾದ ವಿಚಾರವಾಗಿದ್ದು, ಅದಕ್ಕೆ ಎರಡು, ಮೂರು ಪದಗಳಲ್ಲಿ ಪರಿಹಾರ ನೀಡಲು ಅಸಾಧ್ಯ" ಎಂದು ಹೇಳಿದ್ಧಾರೆ.
ವಿದ್ಯುತ್ ತಿದ್ದುಪಡಿ ಮಸೂದೆ ಹಿಂಪಡೆಯುವುದು, ಎಂಎಸ್ಪಿ ಕಾನೂನು ಖಾತರಿ, ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸುವುದು ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಭಾನುವಾರ ಮುಂಬೈನ ಆಜಾದ್ ಮೈದಾನದಲ್ಲಿ ಕಿಸಾನ್ ಮಜ್ದೂರ್ ಮಹಾ ಪಂಚಾಯತ್ ನಡೆಸಲಾಗುತ್ತಿದ್ದು, ಇದಕ್ಕೆ ನೂರಕ್ಕೂ ಅಧಿಕ ಸಂಘಟನೆಗಳು ಬೆಂಬಲ ಸೂಚಿಸಿವೆ.