ಭೋಪಾಲ್, ನ.28 (DaijiworldNews/PY): "ಹಿಂದೂಗಳು ಹಿಂದೂಗಳಾಗಿ ಉಳಿಯಲು ಇಚ್ಛಿಸಿದ್ದಲ್ಲಿ ಭಾರತವನ್ನು ಅಖಂಡ ರಾಷ್ಟ್ರ ಮಾಡಬೇಕು. ಹಿಂದೂಸ್ತಾನ್ ರಾಷ್ಟ್ರದ ಮೂಲ ಹಿಂದುತ್ವ" ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, "ಜಗತ್ತು ಭಾರತದತ್ತ ನೋಡುತ್ತಿದೆ ಹಾಗೂ ಇದಕ್ಕಾಗಿ ಸಮಾಜದ ಎಲ್ಲಾ ವರ್ಗದವರು ಕೆಲಸ ಮಾಡುವುದು" ಮುಖ್ಯ ಎಂದಿದ್ದಾರೆ.
"ಹಿಂದೂಗಳು ಅಸ್ಮಿತೆಯನ್ನು ಮರೆತ ಸಂದರ್ಭ ದೇಶವು ಬಿಕ್ಕಟ್ಟನ್ನು ಎದುರಿಸಿತು. ಆದರೆ, ಹಿಂದೂ ಈಗ ಪುನರುಜ್ಜೀವನವಾಗುತ್ತಿದೆ. ಭಾರತದ ಪ್ರತಿಷ್ಠೆ ಜಾಗತಿಕವಾಗಿ ಬೆಳೆಯುತ್ತಿದೆ ಎನ್ನುವುದಕ್ಕೆ ಇತಿಹಾಸ ಸಾಕ್ಷಿ" ಎಂದು ತಿಳಿಸಿದ್ಧಾರೆ.
"ಭಾರತದಿಂದ ಹಿಂದೂಗಳು ಬೇರ್ಪಡಿಸಲಾಗದವರು ಹಾಗೂ ಭಾರತವು ಹಿಂದೂಗಳಿಂದ ಬೇರ್ಪಡಿಸಲಾಗದು. ಹಿಂದೂಗಳಿಲ್ಲದೇ ಭಾರತವಿಲ್ಲ, ಭಾರತವಿಲ್ಲದೇ ಹಿಂದೂಗಳಿಲ್ಲ. ಹಿಂದೂಸ್ತಾನ್ ರಾಷ್ಟ್ರ ಹಾಗೂ ಅದರ ಮೂಲ ಹಿಂದುತ್ವ" ಎಂದಿದ್ದಾರೆ.