ಬೆಳಗಾವಿ, ನ.28 (DaijiworldNews/PY): "ಶಾಸಕ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ಓರ್ವ ಬಂಡುಕೋರ" ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ವಿಧಾನ ಪರಿಷತ್ ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಅವರು, "ಪರೋಕ್ಷವಾಗಿ ರಮೇಶ್ ಒಬ್ಬ ಬಂಡುಕೋರ. ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಒಬ್ಬರು ನಮ್ಮೊಂದಿಗೆ ಇದ್ದರು. ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಅವರು ಬಂಡುಕೋರಿ ಮಾಡುತ್ತಿದ್ದರು" ಎಂದು ಕಿಡಿಕಾರಿದ್ದಾರೆ.
"ನಮ್ಮಲ್ಲಿ ಸಮಾಧಾನವಾಗದಿದ್ದ ಸಂದರ್ಭ ಅವರು ಬಿಜೆಪಿಗೆ ಹೋಗಿದ್ದಾರೆ. ಬಿಜೆಪಿಯಲ್ಲಿ ಸಹ ಅವರು ಬಂಡುಕೋರತನ ಮಾಡುತ್ತಿದ್ದಾರೆ. ಈ ಕುರಿತು ಬಿಜೆಪಿಯವರೇ ನೋಡಿಕೊಳ್ಳುತ್ತಾರೆ. ಇದಕ್ಕೆಲ್ಲಾ ನಾನು ಉತ್ತರಿಸುವುದಿಲ್ಲ" ಎಂದಿದ್ದಾರೆ.