ನವದೆಹಲಿ, ನ.28 (DaijiworldNews/PY): "ನ್ಯಾಯಾಲಯದ ಕೊಠಡಿಗಳಲ್ಲಿ ನ್ಯಾಯಾಧೀಶರು ತಮ್ಮ ಹೇಳಿಕೆಗಳಲ್ಲಿ ಅತ್ಯಂತ ವಿವೇಚನೆ ಪ್ರದರ್ಶಿಸುವುದು ಮುಖ್ಯ" ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ನಲ್ಲಿ ಸಂವಿಧಾನ ದಿನಾಚರಣೆಯ ಸಮಾರಂಭದಲ್ಲಿ ಸಮಾರೋಪದಲ್ಲಿ ಭಾಷಣ ಮಾಡಿದ ಅವರು, "ನ್ಯಾಯವು ಪ್ರಜಾಪ್ರಭುತ್ವದ ಸುತ್ತ ಸುತ್ತುವ ನಿರ್ಣಾಯಕವಾದ ಅಂಶವಾಗಿದೆ. ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗ ಸಾಮರಸ್ಯದ ಅಸ್ತಿತ್ವದಲ್ಲಿದ್ದರೆ ಅದು ಇನ್ನಷ್ಟು ಬಲಗೊಳ್ಳುತ್ತದೆ" ಎಂದಿದ್ದಾರೆ.
"ನಮ್ಮ ಪ್ರಜಾಪ್ರಭುತ್ವದ ಶ್ರೇಷ್ಠ ಹಬ್ಬ ಸಂವಿಧಾನದ ದಿನ. ಸ್ವತಂತ್ರ ಗಣರಾಜ್ಯದಲ್ಲಿ ನಮ್ಮ ಜೀವನವನ್ನು ನಡೆಸಲು ಸಾಧ್ಯವಾಗಿಸಿದ, ಅಪರಿಚಿತ ಪುರುಷ ಹಾಗೂ ಮಹಿಳೆಯರಿಗೆ ನಮ್ಮ ಋಣವನ್ನು ಪುನರುಚ್ಚರಿಸುವ ದಿನವಾಗಿದೆ" ಎಂದು ಹೇಳಿದ್ದಾರೆ.
"ಸಂವಿಧಾನದ ಮಧ್ಯಭಾಗವು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವವಾಗಿದೆ. ಆರ್ಥಿಕ ಹಾಗೂ ರಾಜಕೀಯ ಅಂಶಗಳನ್ನು ಸೇರಿಸಲು ನ್ಯಾಯದ ಕಲ್ಪನೆಯನ್ನು ವಿಸ್ತರಿಸುತ್ತದೆ. ಭಾರತದ ಎಲ್ಲಾ ನಾಗರಿಕರಿಗೂ ನಾವು ಸುರಕ್ಷಿತವಾಗಿರಬೇಕು ಎಂದು ಸಂವಿಧಾನ ಬಯಸುತ್ತದೆ" ಎಂದಿದ್ದಾರೆ.