ಕೋಲ್ಕತ್ತ, ನ.28 (DaijiworldNews/PY): ಸಂಸತ್ತಿನ ಚಳಿಗಾಲದ ಅಧಿವೇಶದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಸಹಕರಿಸಲು ನನಗೆ ಆಸಕ್ತಿ ಇಲ್ಲ.. ಆದರೆ, ಸಾರ್ವಜನಿಕ ಹಿತಾಸಕ್ತಿ ವಿಷಯಗಳಿಗಾಗಿ ಇತರ ವಿರೋಧ ಪಕ್ಷಗಳೊಂದಿಗೆ ಸಹಕರಿಸುವುದಾಗಿ ತೃಣಮೂಲ ಕಾಂಗ್ರೆಸ್ ತಿಳಿಸಿದೆ.
"ನ.29ರಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಪ್ರತಿಪಕ್ಷಗಳ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಟಿಎಂಸಿ ಬಹುತೇಕ ಪಾಲ್ಗೊಳ್ಳುವುದಿಲ್ಲ" ಎಂದು ಪಕ್ಷದ ಹಿರಿಯ ನಾಯಕರೋರ್ವರು ತಿಳಿಸಿದ್ದಾರೆ.
"ಕೈನಾಯಕರು ಮೊದಲು ತಮ್ಮ ಪಕ್ಷದೊಳಗೆ ಸಮನ್ವಯ ಸಾಧಿಸಲಿ. ನಂತರ ಬೇರೆ ಪಕ್ಷಗಳೊಂದಿಗೆ ಸಮನ್ವಯದ ಬಗ್ಗೆ ಯೋಚನೆ ಮಾಡಲಿ. ಕಾಂಗ್ರೆಸ್ ನಾಯಕರಿಗೆ ಬಿಜೆಪಿ ವಿರುದ್ದ ಹೋರಾಡಲು ದೃಢ ನಿಶ್ಚಯದ ಕೊರತೆ ಇದೆ" ಎಂದಿದ್ದಾರೆ.
"ಪಕ್ಷದ ರಾಷ್ಟ್ರೀಯ ಸಮನ್ವಯತಾ ಸಮಿತಿ ಸಭೆ ನ.29ರಂದು ನಡೆಯಲಿದ್ದು, ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪಕ್ಷದ ಕಾರ್ಯತಂತ್ ರೂಪಿಸುವುದು ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲಿದೆ" ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.