ಬೆಳಗಾವಿ, ನ. 28 (DaijiworldNews/HR): "ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲೇಬೇಕು ಹಾಗಾಗಿ ಗೋಕಾಕ ತಾಲ್ಲೂಕಿನಲ್ಲಿ ನಾನು ಏಜೆಂಟ್, ಕ್ಲರ್ಕ್, ಸಹಾಯಕ ಆಗಲು ಸಿದ್ಧನಿದ್ದೇನೆ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಚುನಾವಣೆಯಲ್ಲಿ ಗೋಕಾಕ ಹಾಗೂ ಅರಭಾವಿಯಲ್ಲಿ ಶೇ 30ರಷ್ಟು ಮತಗಳು ನಮಗೆ ಬರಲಿದ್ದು, ನಮ್ಮ ಬೆಂಬಲಿಗರೇ 60ರಿಂದ 70 ಮತದಾರರಿದ್ದಾರೆ" ಎಂದರು.
ಇನ್ನು "ನಾನು ತಾಲ್ಲೂಕಿನ ಗುಜನಾಳ ಮತಗಟ್ಟೆ ಏಜೆಂಟ್ ಆಗುತ್ತೇನೆ. ಮುಖಂಡ ಅಶೋಕ ಪೂಜಾರಿ ಅವರನ್ನು ಮಮದಾಪುರಕ್ಕೆ ಹಾಕಿದ್ದೇವೆ. ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರಿಲ್ಲವಾದರೂ ಏಜೆಂಟ್ ಆಗುವುದಕ್ಕೆ ತೊಂದರೆ ಇಲ್ಲ. ಚುನಾವಣೆ ನಡೆದ ಬಳಿಕ ಪಕ್ಷ ಸೇರಲಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ.