ತಿರುವನಂತಪುರಂ, ನ.27 (DaijiworldNews/PY): "ಶಬರಿಮಲೆ ಯಾತ್ರೆಯಲ್ಲಿ ಮಕ್ಕಳು ಪಾಲ್ಗೊಳ್ಳಲು ಆರ್ಟಿಪಿಸಿಆರ್ ಪರೀಕ್ಷಾ ವರದಿ ಕಡ್ಡಾಯವಿಲ್ಲ" ಎಂದು ಕೇರಳ ಸರ್ಕಾರ ತಿಳಿಸಿದೆ.
ಹೊಸ ಆದೇಶ ಹೊರಡಿಸಿರುವ ಕೇರಳ ಸರ್ಕಾರ, "ಮಕ್ಕಳಿಗೆ ಆರ್ಟಿಪಿಸಿಆರ್ ಪರೀಕ್ಷೆ ಆನಿವಾರ್ಯವಿಲ್ಲ. ಪೋಷಕರು ಮಾಸ್ಕ್ ಸೇರಿದಂತೆ ಸ್ಯಾನಿಟೈಸರ್ಗಳನ್ನು ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿದೆ. ಇದರೊಂದಿಗೆ ಸಾಮಾಜಿಕ ಅಂತರ ಕಾಪಾಡುವುದು ಮುಖ್ಯ" ಎಂದು ಹೇಳಿದೆ.
"ಶಬರಿಮಲೆಗೆ ತೆರಳುವ ಯಾತ್ರಾರ್ಥಿಗಳು 72 ಗಂಟೆಗಳ ಒಳಗೆ ಎರಡು ಡೋಸ್ ವ್ಯಾಕ್ಸಿನೇಷನ್ ಪಡೆದಿರುವ ಪ್ರಮಾಣಪತ್ರ ಅಥವಾ ಆರ್ಟಿಪಿಸಿಆರ್ ನೆಗೆಟಿವ್ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯ" ಎಂದು ತಿಳಿಸಿದೆ.
"ಮಕ್ಕಳ ಜೊತೆ ಪೋಷಕರು ಸಹ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಬೇಕು. ಮಕ್ಕಳ ಆರೋಗ್ಯ ಕಾಪಾಡಿಕೊಳ್ಳುವ ಜವಾಬ್ದಾರಿ ಪೋಷಕರದ್ದು" ಎಂದು ಆದೇಶಿಸಿದೆ.