ಮುಂಬೈ, ನ. 27 (DaijiworldNews/HR): 20 ವರ್ಷದ ಯುವತಿ ಮೇಲೆ ಅತ್ಯಾಚಾರ ನಡೆಸಿ ಬರ್ಭರವಾಗಿ ಹತ್ಯೆ ಮಾಡಲಾಗಿದ್ದು, ಆಕೆಯ ಮೃತದೇಹ ಖಾಲಿ ಕಟ್ಟಡದ 13ನೇ ಮಹಡಿಯಲ್ಲಿ ಸಿಕ್ಕಿರುವ ಘಟನೆ ಮುಂಬೈಯ ಕುರ್ಲಾ ಪ್ರದೇಶದಲ್ಲಿ ನಡೆದಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, "ಬಾಲಕನೊಬ್ಬ ತನ್ನಿಬ್ಬರು ಸ್ನೇಹಿತರೊಂದಿಗೆ ಕಟ್ಟಡದ ವಿಡಿಯೊ ಮಾಡುತ್ತಿದ್ದಾಗ ಯುವತಿಯ ಮೃತದೇಹ ಕಾಣಿಸಿದ್ದು, ಬಳಿಕ ವಿನೋಬ ಭಾವೆ ನಗರ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ, ಯುವತಿಯ ತಲೆಗೆ ಗಂಭೀರವಾದ ಗಾಯವಾಗಿದೆ. ದೇಹ ಕೊಳೆಯಲು ಪ್ರಾರಂಭವಾಗಿತ್ತು" ಎಂದು ತಿಳಿಸಿದ್ದಾರೆ.
ಇನ್ನು ಯುವತಿಯನ್ನು ಲೈಂಗಿಕವಾಗಿ ಹಲ್ಲೆ ಮಾಡಲಾಗಿದ್ದು ಆರೋಪೊಗಳ ವಿರುದ್ದ ಭಾರತೀಯ ದಂಡ ಸಂಹಿತೆ ಸೆಕ್ಷನ್ 376(ಅತ್ಯಾಚಾರ) ಮತ್ತು 302(ಹತ್ಯೆ) ಅಡಿ ಕೇಸು ದಾಖಲಿಸಲಾಗಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು 5ನೇ ವಲಯ ಡಿಸಿಪಿ ಪ್ರಣಯ ಅಶೋಕ್ ತಿಳಿಸಿದ್ದಾರೆ.