ಹಾವೇರಿ, ನ.27 (DaijiworldNews/PY): ತಮ್ಮನ ಸಾವಿನ ಸುದ್ದಿ ತಿಳಿದು ಅಕ್ಕನೂ ಆತ್ಮಹತ್ಯೆಗೆ ಶರಣಾದ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದ ವಿನಾಯಕ ನಗರದಲ್ಲಿ ನಡೆದಿದೆ.
ಮೃತರನ್ನು ನಾಗರಾಜ್ ಚಲವಾದಿ (16) ಹಾಗೂ ಭಾಗ್ಯಶ್ರೀ (18) ಎಂದು ಗುರುತಿಸಲಾಗಿದೆ.
ಶಾಲೆಗೆ ಆರಂಭವಾಗಿದ್ದರಿಂದ ತರಗತಿಗೆ ತೆರಳುವಂತೆ ಪೋಷಕರು ನಾಗರಾಜ್ ಹೇಳಿದ್ದಾರೆ. ಇದರಿಂದ ಮುನಿಸಿಕೊಂಡ ನಾಗರಾಜ್ ಕೋಣೆಗೆ ತೆರಳಿ ನೇಣು ಹಾಕಿಕೊಂಡಿದ್ದಾನೆ.
ತಮ್ಮ ನಾಗರಾಜ್ ಸಾವಿನ ಸುದ್ದಿ ಕೇಳಿದ ಅಕ್ಕ ಭಾಗ್ಯಶ್ರೀ ಮನೆಗೆ ಬಂದು ಅದೇ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಸಾವಿನಲ್ಲೂ ಅಕ್ಕ-ತಮ್ಮ ಒಂದಾಗಿದ್ದಾರೆ.
ಘಟನೆಯ ಬಗ್ಗೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಶವ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಈ ಬಗ್ಗೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.