ಕೊರಟಗೆರೆ, ನ.27 (DaijiworldNews/PY): "ನಾನು ಸೋತಿರಬಹುದು, ಆದರೆ, ಸುಮ್ಮನೆ ಕೂರುವವನಲ್ಲ. ನಮ್ಮನ್ನು ತೆಗೆಯಬೇಕು ಎನ್ನುವ ಕೆಲವರ ಅಭಿಪ್ರಾಯ ಸುಳ್ಳಾಗಲಿದೆ" ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, "ನನ್ನನ್ನು ಯಾವ ಜನ ಕಳೆದ ಬಾರಿ ಚುನಾವಣೆಯಲ್ಲಿ ಕೈಬಿಟ್ಟಿದ್ದರೋ ಅದೇ ಜನ ನಮ್ಮ ಪಕ್ಷ ಗೆಲ್ಲಿಸುವ ಮೂಲಕ ಎತ್ತಿಕೊಂಡು ಬರುತ್ತಾರೆ. ನಮಗೆ ಪ್ರಾದೇಶಿಕ ಪಕ್ಷವನ್ನು ಹೇಗ ಮುನ್ನಡೆಸಬೇಕು ಎನ್ನುವುದು ತಿಳಿದಿದೆ. ಒಕ್ಕಲಿಗರು ಮಾತ್ರ ಮತ ಹಾಕಿದರೆ ನಾವು ಗೆಲ್ಲುವುದಿಲ್ಲ. ನಮ್ಮದು ಜಾತ್ಯಾತೀತ ಮನೋಭಾವದ ಪಕ್ಷವಾಗಿದ್ದು, ನಮಗೆ ಎಲ್ಲರೂ ಸಹ ಬಹಳ ಮುಖ್ಯ" ಎಂದಿದ್ದಾರೆ.
"ಯಾರ ಬಗ್ಗೆಯೂ ನಾನು ವೈಯುಕ್ತಿಕವಾಗಿ ಮಾತನಾಡುವುದಿಲ್ಲ. ಅನಿಲ್ ಕುಮಾರ್ ಪರಿಷತ್ ಚುನಾವಣೆಯಲ್ಲಿ ಗೆಲ್ಲುತ್ತಾರೆ. ಅವರು ಜನಸೇವೆ ಮಾಡುವ ಉದ್ದೇಶಕ್ಕಾಗಿ ಕೆಲಸಕ್ಕೆ ರಾಜೀನಾಮೆ ನೀಡಿ ಬಂದಿದ್ದಾರೆ" ಎಂದು ಹೇಳಿದ್ದಾರೆ.
ವಕ್ತಾರ ವೈ.ಎಸ್.ವಿ.ದತ್ತಾ, "ಹೆಚ್ ಡಿ ದೇವೇಗೌಡರು ಹಾಸನದಲ್ಲಿ ಸೋತಾಗ ಆ ಕಡೆ ಹೋಗಲಿಲ್ಲ. ಆದರೆ, ತುಮಕೂರಿನಲ್ಲಿ ಸೋತ ಬಳಿಕವೂ ಬಂದಿದ್ದಾರೆ. ಅವರು ಇಲ್ಲಿನ ಜನರ ಪ್ರೀತಿ, ವಿಶ್ವಾಸಕ್ಕೆ ಮಣಿದಿದ್ದಾರೆ" ಎಂದು ತಿಳಿಸಿದ್ದಾರೆ.