ಯಾದಗಿರಿ, ನ 27 (DaijiworldNews/MS): ಯಾದಗಿರಿ ನಗರದ ಹಳೆ ಬಸ್ ನಿಲ್ದಾಣದಲ್ಲಿ ಕಾಮುಕನೊಬ್ಬ ಭಿಕ್ಷುಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಸದ್ಯ ಈತನನ್ನು ಪೊಲೀಸರು ಬಂಧಿಸಿದ್ದಾರೆ. ಬಂದಿತ ಆರೋಪಿಯನ್ನು ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಂಕನೂರ ಗ್ರಾಮದ ನಿವಾಸಿ ಹನುಮಂತ್(40) ಎಂದು ಗುರುತಿಸಲಾಗಿದೆ.
ನವೆಂಬರ್ 23ರ ರಾತ್ರಿ ಈ ಘಟನೆ ನಡೆದಿದ್ದು, ಕಾಮುಕ ಹನುಮಂತ್(40) ರಾತ್ರಿ ಭಿಕ್ಷುಕಿಗೆ ಕಂಠ ಪೂರ್ತಿ ಮದ್ಯ ಕುಡಿಸಿ ತಾನು ಕುಡಿದು ರೇಪ್ ಮಾಡಿದ್ದಾನೆ. ಭಿಕ್ಷುಕಿ ವಿರೋಧಿಸಿದ್ದರೂ, ಆಕೆಯ ಮೇಲೆ ಹಲ್ಲೆ ಮಾಡಿ ಅತ್ಯಾಚಾರ ಮಾಡಿದ್ದಾನೆ.
ಇದೆಲ್ಲದರ ನಡುವೆ ಸ್ಥಳೀಯರು ಆತನನ್ನು ಪ್ರಶ್ನಿಸಿದಾಗ ಭಿಕ್ಷುಕಿಯೇ ನನ್ನ ಪತ್ನಿ ಎಂದು ನಾಟಕವಾಡಿದ್ದಾನೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಕಾಮುಕನನ್ನು ಅವರಿಗೆ ಒಪ್ಪಿಸಲಾಗಿದೆ. ಯಾದಗಿರಿ ಮಹಿಳಾ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.