ಬೆಂಗಳೂರು, ನ.26 (DaijiworldNews/HR): ಬೆಂಗಳೂರಿನಲ್ಲಿ ಬಾಂಗ್ಲಾದೇಶದ ಸುಮಾರು ಐದು ಮಂದಿ ಅಕ್ರಮ ವಲಸಿಗರು ನೆಲೆಸಿದ್ದು, ಬೆಂಗಳೂರಿನ ಕಾಡುಗೋಡಿ ಸಮೀಪ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಾಂಡಿ ಹಳ್ಳಿಯಲ್ಲಿ ಒಂಭತ್ತು ಮಂದಿ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಬಂಧಿಸಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಐವರನ್ನು ಬಂಧಿಸಲಾಗಿದೆ.
ಇನ್ನು ಪೊಲೀಸರು ದಾಳಿ ನಡೆಸಿ ಮಹಾರಾಷ್ಟ್ರದ ಐದು ಮಂದಿಯನ್ನು ಬಂಧಿಸಿದ್ದು, ಇದಕ್ಕೂ ಮೊದಲು ನಾಗ್ಪುರ್ದಲ್ಲಿ 11 ಮಂದಿ ಬಾಂಗ್ಲಾದೇಶಿ ವಲಸಿಗರನ್ನು ರಕ್ಷಿಸಲಾಗಿತ್ತು.
ನಾಗ್ಪುರ್ ಪೊಲೀಸ್ ಹಾಗೂ ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳದ ಮೂಲಕ 11 ಮಂದಿಯನ್ನು ರಕ್ಷಣೆ ಮಾಡಿದ್ದು, ಅವರನ್ನು ಮಾನವ ಕಳ್ಳಸಾಗಣೆ ಮೂಲಕ ಗುಜರಾತ್ನಲ್ಲಿ ಕೂಲಿ ಕೆಲಸಕ್ಕೆ ಕರೆತರಲಾಗಿತ್ತು. ಅವರು ನಕಲಿ ದಾಖಲೆ ಪತ್ರಗಳೊಂದಿಗೆ ಭಾರತವನ್ನು ಪ್ರವೇಶ ಮಾಡಿದ್ದರು ಎನ್ನಲಾಗಿದೆ.