ನವದೆಹಲಿ, ನ.26 (DaijiworldNews/HR): ರೈತರ ಪ್ರತಿಭಟನೆಯು ಬಿಜೆಪಿ ಸರ್ಕಾರದ ದುರಹಂಕಾರ ಮತ್ತು ಹುತಾತ್ಮರಾದ 700 ರೈತರ ತ್ಯಾಗವನ್ನು ನೆನಪಿಸಲಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರೈತರ ಪ್ರತಿಭಟನೆಗೆ ಇಂದಿಗೆ ಒಂದು ವರ್ಷಗಳು ಕಳೆಯುತ್ತಿದ್ದು,ರೈತರ ಸತ್ಯಾಗ್ರಹವು ರೈತರ ದೃಢ ನಿಲುವು ಮತ್ತು ಅನ್ನದಾತರ ಮೇಲೆ ಸರ್ಕಾರ ನಡೆಸಿದ ದೌರ್ಜನ್ಯವನ್ನು ನೆನಪಿಸುತ್ತದೆ" ಎಂದರು.
ಇನ್ನು ಭಾರತದಲ್ಲಿ ರೈತರನ್ನು ಎಂದಿಗೂ ಕಡೆಗಣಿಸಲು ಸಾಧ್ಯವಿಲ್ಲ. ರೈತರ ಹೋರಾಟಕ್ಕೆ ಸಿಕ್ಕ ಗೆಲುವೇ ಇದಕ್ಕೆ ನಿದರ್ಶನ ಎಂದು ಹೇಳಿದ್ದಾರೆ. ಅಲ್ಲದೆ, 'ಜೈ ಕಿಸಾನ್' ಎಂದು ಘೋಷಣೆಯನ್ನೂ ಸೇರಿಸಿದ್ದಾರೆ" ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿದ ರೈತರು ಕಳೆದ ವರ್ಷದ 26ರಿಂದ ದೆಹಲಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.