ರಜೌರಿ, ನ.26 (DaijiworldNews/PY): "ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಪಾಕಿಸ್ತಾನ ಉಗ್ರನನ್ನು ಹತ್ಯೆ ಮಾಡಲಾಗಿದೆ" ಎಂದು ಭಾರತೀಯ ಸೇನೆ ಶುಕ್ರವಾರ ತಿಳಿಸಿದೆ.
"ಜಮ್ಮು-ಕಾಶ್ಮೀರದ ರಜೌರಿಯ ಬಿಂಬರ್ಗಲಿ ಸೆಕ್ಟರ್ನಲ್ಲಿ ನ.25ರ ರಾತ್ರಿ ಪಾಕ್ ಉಗ್ರರು ಎಲ್ಒಸಿಯ ಒಳಗೆ ನುಗ್ಗಲು ಪ್ರಯತ್ನಿಸುತ್ತಿದ್ದರು. ಇದರಿಂದ ಎಚ್ಚೆತ್ತ ಭಾರತೀಯ ಸೇನಾ ಪಡೆಗಳು ಗುಂಡು ಹಾರಿಸಿ ಓರ್ವ ಪಾಕ್ ಉಗ್ರನನ್ನು ಹೊಡೆದುರುಳಿಸಿದ್ದಾರೆ" ಎಂದು ವೈರ್ಟ್ ನೈರ್ಟ್ ಕಾರ್ಪ್ಸ್ ಹೇಳಿದೆ.
"ಉಗ್ರನ ಬಳಿಯಿದ್ದ ಆಯುಧ ಸೇರಿದಂತೆ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದೆ" ಎಂದು ತಿಳಿಸಿದೆ.