ನೋಯ್ಡಾ, ನ.25 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಜೇವರ್ನಲ್ಲಿ ನೊಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, "21ನೇ ಶತಮಾನದ ನವಭಾರತ ಇಂದು ಅತ್ಯುತ್ತಮ ಆಧುನಿಕ ಮೂಲ ಸೌಕರ್ಯಗಳನ್ನು ಹೊಂದುತ್ತಿದೆ. ಉತ್ತಮ ವಿಮಾನ ನಿಲ್ದಾಣ, ಉತ್ತಮ ರೈಲು ಹಾಗೂ ಉತ್ತಮ ರಸ್ತೆಗಳು ಕೇವಲ ಮೂಲ ಸೌಕರ್ಯ ಯೋಜನೆಗಳಷ್ಟೇ ಅಲ್ಲ. ಇಡೀ ಪ್ರದೇಶವನ್ನು ಅವುಗಳು ಬದಲಿಸುತ್ತದೆ" ಎಂದಿದ್ದಾರೆ.
"ಸ್ವಾತಂತ್ರ್ಯ ಪಡೆದ ಏಳು ದಶಕಗಳ ಬಳಿಕ, ಅರ್ಹವಾದದ್ದನ್ನು ಉತ್ತರಪ್ರದೇಶ ಅಂತಿಮವಾಗಿ ಪಡೆದುಕೊಳ್ಳುತ್ತಿದೆ. ಇಂದು ಉತ್ತರಪ್ರದೇಶವು ಡಬಲ್ ಎಂಜಿನ್ ಸರ್ಕಾರದ ಪ್ರಯತ್ನದಿಂದ ದೇಶದ ಅಂತ್ಯಂತ ಸಂಪರ್ಕಿತ ಪ್ರದೇಶವಾಗಿ ಬದಲಾಗುತ್ತಿದೆ" ಎಂದು ತಿಳಿಸಿದ್ದಾರೆ.
"ನೊಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಉತ್ತರ ಭಾರತದ ಸರಕು ಸಾಗಣೆಯ ಪ್ರಮುಖ ತಾಣವಾಗಲಿದೆ" ಎಂದಿದ್ಧಾರೆ.
"ನೊಯ್ಡಾ ವಿಮಾನ ನಿಲ್ದಾಣದ ಮೊದಲ ಹಂತದ ಅಬಿವೃದ್ದಿಯು 10,050 ಕೋಟಿ ರೂ. ವೆಚ್ಚದಲ್ಲಿ ಆಗಲಿದ್ದು, ಈ ಹಂತದಲ್ಲಿ 1,300 ಹೆಕ್ಟೇರ್ಗೂ ಹೆಚ್ಚಯ ಜಾಗವನ್ನು ಬಳಕೆ ಮಾಡಲಾಗುವುದು. ವರ್ಷದಲ್ಲಿ ಈ ವಿಮಾನ ನಿಲ್ದಾಣವು 1.2 ಕೋಟಿ ಪ್ರಯಾಣಿಕರಿಗೆ ಸೇವೆ ಒದಗಿಸುವ ಸಾಮರ್ಥ್ಯ ಹೊಂದಲಿದೆ ಹಾಗೂ ನಿರ್ಮಾಣ ಕಾಮಗಾರಿಯು 2024ರ ವೇಳೆಗೆ ಪೂರ್ಣವಾಗಲಿದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.