ಕೇರಳ, ನ.25 (DaijiworldNews/HR): ಪುನೀತ್ ರಾಜ್ ಕುಮಾರ್ ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಟನ ಪೋಟೋ ಹಿಡಿದು, ಶಬರಿಮಲೆಯ ಅಯ್ಯಪ್ಪನ ದರ್ಶನ ಮಾಡಿರುವ ಘಟನೆ ನಡೆದಿದೆ.
ನಟ ಪುನೀತ್ ರಾಜ್ ಕುಮಾರ್ ಅಗಲಿಕೆಯ ನೋವಿನಲ್ಲಿಯೂ ಶಬರಿಮಲೆಯ ಅಯ್ಯಪ್ಪನ ಮಾಲೆ ಧರಿಸಿದ ಅಭಿಮಾನಿಯೊಬ್ಬ ತನ್ನ ಅಭಿಮಾನ ಪ್ರದರ್ಶಿಸಿದ್ದು ಎಲ್ಲರನ್ನು ಗಮನಸೆಳೆದಿದೆ.
ಪುನೀತ್ ಅಭಿಮಾನಿಯೊಬ್ಬ ತಲೆ ಮೇಲೆ ಹಿಡುಮುಡಿ ಹೊತ್ತು, ಅಪ್ಪು ಪೋಟೋ ಹಿಡಿದು, ಶಬರಿಮಲೆಯ ಅಯ್ಯಪ್ಪನ 18 ಮೆಟ್ಟಿಲೇರಿ ಈ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾನೆ.
ಇನ್ನು ಶಬರಿಮಲೆಯ ಅಯ್ಯಪ್ಪನ ಮೆಟ್ಟಿಲನ್ನು ಪುನೀತ್ ಪೋಟೋ ಹಿಡಿದು ಸಾಗುತ್ತಿರುವಂತ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.