ಮುಂಬೈ, ನ.25 (DaijiworldNews/HR): ಫೋಟೊ ಜರ್ನಲಿಸ್ಟ್ ಮೇಲೆ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣದ ಮೂವರು ಅಪರಾಧಿಗಳಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿ ಬಾಂಬೆ ಹೈಕೋರ್ಟ್ ಆದೇಶಿಸಿದೆ.
ಬಾಂಬೆ ಹೈಕೋರ್ಟ್
ಅಪರಾಧಿಗಳನ್ನು ವಿಜಯ್ ಜಾಧವ್, ಮೊಹಮ್ಮದ್ ಕಾಸಿಮ್ ಶೇಖ್ ಹಾಗೂ ಮೊಹಮ್ಮದ್ ಅನ್ಸಾರಿ ಎಂದು ಗುರುತಿಸಲಾಗಿದೆ.
ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಾಧನಾ ಜಾಧವ್ ಹಾಗೂ ಪೃಥ್ವಿರಾಜ್ ಚವಾಣ್ ಅವರಿದ್ದ ವಿಭಾಗೀಯ ನ್ಯಾಯಪೀಠ, "ತಾವು ಎಸಗಿದ ಕೃತ್ಯಕ್ಕೆ ಅಪರಾಧಿಗಳು ಬದುಕಿರುವವರೆಗೆ ಪಶ್ಚಾತ್ತಾಪ ಪಡಬೇಕು" ಎಂದು ಹೇಳಿದೆ.
2013ರ ಆಗಸ್ಟ್ 22ರಂದು ಮುಂಬೈನಲ್ಲಿರುವ ಶಕ್ತಿ ಮಿಲ್ಸ್ನ ಆವರಣದಲ್ಲಿ ಮೂವರು ಆರೋಪಿಗಳು 22 ವರ್ಷದ ಫೋಟೊ ಜರ್ನಲಿಸ್ಟ್ ಮೇಲೆ ಅತ್ಯಾಚಾರ ಎಸಗಿದ್ದು, ಈ ಮೂವರು ಅಪರಾಧಿಗಳಿಗೆ ವಿಚಾರಣಾ ಕೋರ್ಟ್ ಮರಣದಂಡನೆ ವಿಧಿಸಿತ್ತು.