ಬೆಂಗಳೂರು, ನ.25 (DaijiworldNews/HR): ಸಂಪುಟ ಪುನಾರಚನೆಗೆ ನಾವ್ಯಾರು ಕಾಯುತ್ತಿಲ್ಲ. ನಾವು ಜಾತ್ರೆ ಪಕ್ಷದವರಲ್ಲ. ಕೇಳಲು ನಮ್ಮಬಾಯಿಗೆ ಯಾರು ಗಂ ಹಾಕಿಲ್ಲ. ಸಿಎಂ, ವರಿಷ್ಠರು ನಿರ್ಧಾರ ಮಾಡಬೇಕು ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಸಂಪುಟ ಪುನಾರಚನೆ ವಿಚಾರವಾಗಿ ಮಾತನಾಡಿದ ಅವರು, "ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಖಾಲಿ ಹುದ್ದೆಗಳನ್ನು ಕೊಟ್ಟರೆ ತಪ್ಪೇನಿದೆ. ನನ್ನನ್ನು ಸುಮ್ಮನಿರಿಸಲು ಯಾರ ಕೈಯಲ್ಲೂ ಆಗುವುದಿಲ್ಲ. ಸಂದರ್ಭ ಬಂದಾಗ ನೋಡೋಣ" ಎಂದರು.
ಇನ್ನು 40 ಪರ್ಸೆಂಟ್ ಸರ್ಕಾರ ಎಂಬ ಆರೋಪ, ರಾಜ್ಯಪಾಲರಿಗೆ ಕಾಂಗ್ರೆಸ್ ದೂರು ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ನವರು ಸರ್ವ ಸ್ವತಂತ್ರರು. ಎಲ್ಲಕಡೆ ಸುಮ್ಮನೆ ಹೋಗುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದವರೆಂದು ಹೇಳುತ್ತಾರೆ ಆದರೆ ದೇಶ ಲೂಟಿ ಹೊಡೆದವರು ಕಾಂಗ್ರೆಸ್ ನವರು" ಎಂದು ತಿರುಗೇಟು ನೀಡಿದ್ದಾರೆ.