ಮುಂಬೈ, ನ.25 (DaijiworldNews/PY): ಭಾರತೀಯ ನೌಕಾಪಡೆಯು ಗುರುವಾರ ಮುಂಬೈನ ನೌಕಾನೆಲೆಯಲ್ಲಿ ಜಲಾಂತರ್ಗಾಮಿ ಐಎನ್ಎಸ್ ವೇಲಾವನ್ನು ಸೇರ್ಪಡೆ ಮಾಡಿಕೊಂಡಿದ್ದು, ಇದರಿಂದ ದೇಶದ ನೌಕಾ ಶಕ್ತಿಗೆ ಇನ್ನಷ್ಟು ಬಲ ಬಂದಿದೆ.
ಕಲ್ವರಿ-ಕ್ಲಾಸ್ ಜಲಾಂತರ್ಗಾಮಿ ಯೋಜನೆ-75 ಅಡಿಯಲ್ಲಿ ಭಾರತೀಯ ನೌಕಾಪಡೆ ಸೇರ್ಪಡೆಗೊಳ್ಳಲಿರುವ 6 ಜಲಾಂತರ್ಗಾಮಿ ನೌಕೆಗಳಲ್ಲಿ ಇದು ನಾಲ್ಕನೆಯದ್ದಾಗಿದೆ.
ಮುಂಬೈನ ನೋವಲ್ ಡಾಕ್ಯಾರ್ಡ್ನಲ್ಲಿ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಂಬಿರ್ ಸಿಂಗ್ ಅವರ ಸಮ್ಮುಖದಲ್ಲಿ ಜಲಾಂತರ್ಗಾಮಿ ನೌಕೆಗೆ ಚಾಲನೆ ನೀಡಲಾಯಿತು.
"ಜಲಾಂತರ್ಗಾಮಿ ಕಾರ್ಯಾಚರಣೆಯ ಸಂಪೂರ್ಣ ಸ್ಪೆಕ್ಟ್ರಮ್ ಅನ್ನು ಕೈಗೊಳ್ಳುವ ಸಾಮರ್ಥ್ಯವನ್ನು ಐಎನ್ಎಸ್ ವೆಲಾ ಹೊಂದಿದೆ" ಎಂದು ನೌಕಾಪಡೆಯ ಮುಖ್ಯಸ್ಥರು ಹೇಳಿದ್ದಾರೆ.
ಇದಕ್ಕೂ ಮುನ್ನ ನವೆಂಬರ್ 21ರಂದು ಐಎನ್ಎಸ್ ವಿಶಾಖಪಟ್ಟಣಂ ಅನ್ನು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿತ್ತು.