ಬೆಂಗಳೂರು, ನ. 24 (DaijiworldNews/SM): ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ದಿಢೀರ್ ಸಾವಿನ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಅದರಲ್ಲೂ ಯುವ ಪ್ರಯಾದವರ ಸಂಖ್ಯೆ ಹೆಚ್ಚಾಗಿದೆ ಎನ್ನುವುದು ವಿಪರ್ಯಾಸ. ಅಚಾನಕ್ ಸಾವು ಕುಟುಂಬಸ್ಥರಲ್ಲಿ ಆಘಾತವನ್ನುಂಟು ಮಾಡುತ್ತಿದೆ.
ಬಹುತೇಕ ಸಾವುಗಳು ಸಂಭವಿಸುವ ಸಂದರ್ಭದಲ್ಲಿ ಹಿಂದೆ ಯಾವುದೇ ಅನಾರೋಗ್ಯ ಸಮಸ್ಯೆಗಳಿರುವುದಿಲ್ಲ. ಆದರೆ, ಏಕಾಏಕಿ ಸಾವು ಸಂಭವಿಸುತ್ತಿರುವುದು ಚಿಂತೆಗೀಡು ಮಾಡಿದೆ. ಕರ್ನಾಟಕದಲ್ಲಿಇಂತಹ ಸಾವುಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. 2020ರಲ್ಲಿ ಸರಿಸುಮಾರು 50 ಸಾವಿರ ಮಂದಿ ಇಂತಹ ಏಕಾಏಕಿ ಸಾವಿಗೆ ಒಳಗಾಗಿದ್ದಾರೆ.
ಇನ್ನು 18ಕ್ಕಿಂತ ಕೆಳಗಿನ ಮಕ್ಕಳು ಕೂಡ ಇಂತಹ ಏಕಾಏಕಿ ಕೊನೆಯುಸಿರೆಳೆಯುತ್ತಿರುವುದು ವಿಪರ್ಯಾಸ. ಯುವ ವಯಸ್ಸಿನವರು, 55 ವರ್ಷದ ಕೆಳಗಿನವರು ಕೂಡ ಇತ್ತೀಚಿಗೆ ಸಾವನ್ನಪ್ಪುತ್ತಿದ್ದು ಆಘಾತಕಾರಿ ಸಂಗತಿಯಾಗಿದೆ.
ಈ ಬಗ್ಗೆ ಆರೋಗ್ಯ ಇಲಾಖೆ ಸರ್ವೆ ನಡೆಸಿದ್ದು, ಇಂತಹ ಏಕಾಏಕಿ ಸಾವಿಗೆ ಪ್ರಮುಖ ಕಾರಣ ಹೃದಯಾಘಾತ ಎನ್ನುವುದನ್ನು ಪತ್ತೆ ಹಚ್ಚಿದೆ. ಮತ್ತೊಂದೆಡೆ ಬ್ರೈನ್ ಹ್ಯಾಮರೇಜ್ ಕಾರಣದಿಂದಲೂ ಸಾವುಗಳು ಸಂಭವಿಸುತ್ತಿವೆ ಎನ್ನುವುದು ಪತ್ತೆಯಾಗಿದೆ. ಮತ್ತೆಕೆಲವು ಪ್ರಕರಣಗಳು ಇತರ ಕಾರಣದಿಂದಾಗಿ ಸಾವು ಸಂಭವಿಸುತ್ತಿವೆ.
2020ರಲ್ಲಿ ಸರಿ ಸುಮಾರು 50 ಸಾವಿರದಷ್ಟು ಸಾವುಗಳು ಸಂಭವಿಸಿದೆ. ಈ ಪೈಕಿ ಸರಿಸುಮಾರು 28 ಸಾವಿರ ಮಂದು ಹೃದಯಾಘಾತದಿಂದಲೇ ಸಾವನ್ನಪ್ಪಿದ್ದಾರೆ. ವರ್ಷದಿಂದ ವರ್ಷಕ್ಕೆ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಕಳೆದ ಐದು ವರ್ಷಗಳಲ್ಲಿ ಸರಿಸುಮಾರು 2.3 ಲಕ್ಷ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಇನ್ನು 2020ರಲ್ಲಿ ಶೇ. 3ರಷ್ಟು ಮಂದಿ ಮಕ್ಕಳು ಕಾರ್ಡಿಯಾಕ್ ಅರೆಸ್ಟ್ ಗೆ ತುತ್ತಾಗಿದ್ದಾರೆ. 14ರ ಹರೆಯದ ಕೆಳಗಿನವರು ಇದರಲ್ಲಿ ಅಧಿಕವಾಗಿದ್ದಾರೆ.
ಇಂತಹ ಸಮಸ್ಯೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿಯಮಿತ ವ್ಯಾಯಾಮ, ಆಹಾರ ಪದ್ಧತಿಯಲ್ಲಿ ಸಮತೋಲನ ಹಾಗೂ ನಿಯಂತ್ರಣ ಹಾಗೂ ನಿಯಮಿತವಾಗಿ ವೈದ್ಯಕೀಯ ತಪಾಸಣೆ ನಡೆಸುವುದು ಅಗತ್ಯವಾಗಿದೆ.