ಬೆಂಗಳೂರು, ನ.24 (DaijiworldNews/PY): "ಜಿನ್ನಾ ಹಾಗೂ ಓವೈಸಿಗೂ ಯಾವುದೇ ರೀತಿಯಾದ ವ್ಯತ್ಯಾಸವಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.
ಸಿಎಎ ಕಾಯ್ದೆಯನ್ನು ಭಾರತ ಸರ್ಕಾರ ಹಿಂತೆಗೆದುಕೊಳ್ಳದೇ ಇದ್ದಲ್ಲಿ ರಕ್ತಪಾತವಾಗುತ್ತದೆ ಎಂದ ಓವೈಸಿ ಹೇಳಿಕೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಂವಿಧಾನದ ಬಗ್ಗೆ ನಂಬಿಕೆ ಇರುವವರಿಗೆ ಹಿಂಸೆ, ರಕ್ತಪಾತದಲ್ಲಿ ನಂಬಿಕೆ ಇರುವುದಿಲ್ಲ ಎಂದಿ ಓವೈಸಿ ಹೇಳಿದ್ದರು. ಈ ಮಾತನ್ನು ಕೇಳಿದರೆ ಜಿನ್ನಾ ಹಾಗೂ ಓವೈಸಿಗೂ ಯಾವುದೇ ವ್ಯತ್ಯಾಸವಿಲ್ಲ ಎನ್ನುವುದು ತಿಳಿಯುತ್ತದೆ" ಎಂದಿದ್ದಾರೆ.
"ಓವೈಸಿಯ ಹೇಳಿಕೆ, ಹೊರದೇಶದಲ್ಲಿರುವ ಮುಸಲ್ಮಾನರಿಗೂ ಪೌರತ್ಮ ನೀಡಬೇಕು ಎಂಬುದಾಗಿದೆ. ಎಲ್ಲರಿಗೂ ಸಹ ಪೌರತ್ವ ನೀಡಬೇಕಾದರೆ. ಬಾಂಗ್ಲಾದೇಶ, ಅಫ್ಗಾನಿಸ್ತಾನ ಹಾಗೂ ಪಾಕಿಸ್ತಾನ ರಾಷ್ಟ್ರಗಳು ಇಸ್ಲಾಂ ರಾಷ್ಟ್ರ ಎಂದು ಘೋಷಣೆ ಮಾಡಿರುವುದನ್ನು ಕೈಬಿಟ್ಟು, ಅಖಂಡ ಭಾರತ ಆಗಬೇಕು. ಹಾಗಾದಲ್ಲಿ ಮಾತ್ರ ಎಲ್ಲರಿಗೂ ಪೌರತ್ವ ಸಿಗುತ್ತದೆ" ಎಂದು ತಿಳಿಸಿದ್ದಾರೆ.
"ರಕ್ತಪಾತ ನಡೆಯದಂತೆ ತಡೆಯುವ ಸಾಮರ್ಥ್ಯ ಭಾರತ ಸರ್ಕಾರಕ್ಕಿದೆ. ಸಮಾನ ನಾಗರಿಕ ಸಂಹಿತೆ ಕುರಿತು ಅಂಬೇಡ್ಕರ್ ಅವರು ಪ್ರಸ್ತಾಪಿಸಿದ್ದಾರೆ. ಆದರೆ, ಇವರು ಭಾರತದಲ್ಲಿ ಸಮಾನ ನಾಗರಿಕ ಸಂಹಿತೆ ತರಬಾರದು ಎನ್ನುತ್ತಾರೆ. ಇಸ್ಲಾಂ ಕಾನೂನಿನ ಪ್ರಕಾರ, ತಲಾಖ್ ಹೇಳಲು, ಮೂರು ಮೂರು ವಿವಾಹವಾಗಲು ಇಸ್ಲಾಂ ಧರ್ಮ ಬೇಕು, ಆದರೆ, ಸಮಾನ ನಾಗರಿಕ ಸಂಹಿತೆ ಮಾತ್ರ ಬೇಡ" ಎಂದಿದ್ದಾರೆ