ನವದೆಹಲಿ, ನ 24 (DaijiworldNews/MS): ಭಾರತದಲ್ಲಿ ಸದ್ಯಕ್ಕೆ ಕೋವಿಡ್-19 ಲಸಿಕೆಯ ಬೂಸ್ಟರ್ ಡೋಸ್ಗಳ ಅಗತ್ಯವಿಲ್ಲ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದಾರೆ.
ಕೋವಿಡ್ ಕುರಿತಾದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಗುಲೇರಿಯಾ ಅವರು, ಭಾರತದಲ್ಲಿ ಸದ್ಯಕ್ಕೆ ಬೂಸ್ಟರ್ ಡೋಸ್ ಅಗತ್ಯವಿಲ್ಲ . ಕೊವೀಡ್ ನ ಮೂರನೇ ಅಲೆ" ದ ಸಾಧ್ಯತೆಯು "ಪ್ರತಿ ದಿನವೂ ಕ್ಷೀಣಿಸುತ್ತಿದೆ. ಪ್ರಸ್ತುತವಾಗಿ ನಮ್ಮ ಸೆರೋ-ಪಾಸಿಟಿವಿಟಿ ದರವು ತುಂಬಾ ಹೆಚ್ಚಾಗಿದೆ. ಹೀಗಾಗಿ ಸದ್ಯಕ್ಕೆ ಬೂಸ್ಟರ್ ಡೋಸ್ ಅಗತ್ಯವಿಲ್ಲ ಎಂದು ಸೂಚಿಸುತ್ತದೆ. ಭವಿಷ್ಯದಲ್ಲಿ ನಮಗೆ ಇದು ಬೇಕಾಗಬಹುದು, ”ಎಂದು ಅವರು ಹೇಳಿದ್ದಾರೆ.
ಸಾಂಕ್ರಾಮಿಕ ರೋಗದ ವಿರುದ್ಧ ನಡೆಯುತ್ತಿರುವ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನವನ್ನು ಶ್ಲಾಘಿಸಿದ ಗುಲೇರಿಯಾ, ಲಸಿಕೆ ತಯಾರಿಕೆಯಲ್ಲಿ ಭಾರತ ಹೇಗೆ ಬಹಳ ದೂರ ಸಾಗಿದೆ ಲಸಿಕೆಗಳನ್ನು ಆಮದು ಮಾಡುವುದರಿಂದ ಈಗ ಇತರ ದೇಶಗಳಿಗೆ ಭಾರತ ಡೋಸ್ ಗಳನ್ನು ರಫ್ತು ಮಾಡುವಲ್ಲಿ ಮುಂದಾಳತ್ವ ವಹಿಸುವವರೆಗೆ ಮುಂಚೂಣಿಗೆ ತಲುಪಿದೆ ಎಂದು ಹೇಳಿದ್ದಾರೆ.
ಎಚ್1ಎನ್1 ಭಾರತಕ್ಕೆ ಅಪ್ಪಳಿಸಿದಾಗ, ವಿದೇಶಗಳಿಂದ ಲಸಿಕೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಲಸಿಕೆಗಳನ್ನು ಆಮದು ಮಾಡುವುದರಿಂದ ಹಿಡಿದು ನಮ್ಮದೇ ಆದ ಸ್ಥಳೀಯ ಲಸಿಕೆಯನ್ನು ತಯಾರಿಸುವವರೆಗೆ, ನಾವು ಬಹಳ ದೂರ ಬಂದಿದ್ದೇವೆ. ಇಂದು, ನಮ್ಮ ಕೋವಿಡ್-19 ಲಸಿಕೆಗಳನ್ನು ಇತರ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.