ಪಾಲಕ್ಕಾಡ್, ನ 24 (DaijiworldNews/MS): ಇತ್ತೀಚೆಗೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಲಂಪುಳದಲ್ಲಿ ಸೋಮವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಳೀಯ ಮುಖಂಡನನ್ನು ಪತ್ನಿಯ ಎದುರೇ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಬ್ಬ ಪಿಎಫ್ಐ ಪದಾಧಿಕಾರಿಯನ್ನು ಕೇರಳ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಎಲಪ್ಪುಲ್ಲಿ ನಲ್ಲಿ ಆರ್ಎಸ್ಎಸ್ ಕಾರ್ಯಕರ್ತ 27ರ ಹರೆಯದ ಸುಜಿತ್ ಅವರನ್ನು ನ. 15ರಂದು ಪತ್ನಿಯನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಹಾಡಹಗಲೇ ಚೂರಿಯಿಂದ ಇರಿದು ಕೊಲೆಗೈಯ ಲಾಗಿತ್ತು. ಈ ಕೊಲೆಯನ್ನು ನೋಡಿದ ಸ್ಥಳದಲ್ಲಿದ್ದ 56 ವರ್ಷದ ರಾಮು ಎಂಬುವವರು ಆಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇದಕ್ಕೆ ಸಂಬಂಧಿಸಿ ಈ ಹಿಂದೆಯೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಪದಾಧಿಕಾರಿಯೋರ್ವನನ್ನು ಬಂಧಿಸಲಾಗಿತ್ತು.
ಮಂಗಳವಾರ ಬಂಧನಕ್ಕೊಳಗಾದ ವ್ಯಕ್ತಿ ಕೊಲೆ ಯಲ್ಲಿ ನೇರವಾಗಿ ಭಾಗಿಯಾಗಿದ್ದಾತ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ತನಿಖೆಯ ದೃಷ್ಟಿ ಯಿಂದ ಆತನ ಹೆಸರು ಮತ್ತು ವಿಳಾಸ ಬಹಿರಂಗ ಪಡಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿ ಎನ್ಐಎ ತನಿಖೆ ನಡೆಸಲು ಆಗ್ರಹಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಅವರು ದಿಲ್ಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ನಿನ್ನೆ ಮನವಿ ಸಲ್ಲಿಸಿದ್ದರು.