ಶಿವಮೊಗ್ಗ, ನ.24 (DaijiworldNews/PY): "ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಮುಂದಿನ ದಿನಗಳಲ್ಲಿ ಕರ್ನಾಟಕ ಜನತಾ ಪಕ್ಷವನ್ನು ಮತ್ತೆ ಕಟ್ಟಲಿದ್ದು, ಶೀಘ್ರದಲ್ಲಿಯೇ ಬಸವರಾಜ ಬೊಮ್ಮಾಯಿ ಸರ್ಕಾರ ಪತನವಾಗಲಿದೆ" ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.
"ಯಡಿಯೂರಪ್ಪ ಅವರನ್ನು ಮತ್ತೆ ಬಿಜೆಪಿಯ ಕೇಂದ್ರೀಯ ನಾಯಕರು ನಿರ್ಲಕ್ಷಿಸಿದ್ದಾರೆ. ಈ ಕಾರಣದಿಂದ ಕೇಂದ್ರದ ನಾಯಕರ ವಿರುದ್ದ ಯಡಿಯೂರಪ್ಪ ಅವರು ಅಸಮಾಧಾನಗೊಂಡಿದ್ದಾರೆ. ಮತ್ತೆ ಯಡಿಯೂರಪ್ಪ ಅವರು ಕೆಜೆಪಿಗೆ ಸೇರಲಿದ್ದು, ಶೀಘ್ರದಲ್ಲೇ ಬಸವರಾಜ ಬೊಮ್ಮಾಯಿ ಸರ್ಕಾರ ಪತನವಾಗಲಿದೆ" ಎಂದಿದ್ದಾರೆ.
"2012ರಲ್ಲಿ ಯಡಿಯೂರಪ್ಪ ಅವರು ಕೆಜೆಪಿ ಸೇರಿದ್ದರು. ಕೆಜೆಪಿ, ಬಿಜೆಪಿಗೆ ಓಟ್ಗಳನ್ನು ಕಡಿತ ಮಾಡುವುದರಲ್ಲಿ ಸಫಲವಾಗಿತ್ತು. ಯಡಿಯೂರಪ್ಪ ಅವರು 2014ರ ಲೋಕಸಭಾ ಚುನಾವಣೆಯ ಹಿನ್ನೆಲೆ ಬಿಜೆಪಿಯನ್ನು ವಿಲೀಗೊಳಿಸಿದ್ದರು" ಎಂದು ತಿಳಿಸಿದ್ದಾರೆ.