ಬೆಂಗಳೂರು, ನ.24 (DaijiworldNews/PY): "ಕಾಂಗ್ರೆಸ್ಸಿಗರು ಬಿಜೆಪಿಗೆ ಹೆದರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ಸಲ್ಲಿಸಿದ್ದಾರೆ" ಎಂದು ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.
ಮಾಜಿ ಪ್ರಧಾನಿ ದಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ವೇಳೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ್ದು ಎನ್ನಲಾದ ವಿಡಿಯೋ ತುಣುಕೊಂದು ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ಉಲ್ಲೇಖಿಸಿ ಟೀಕೆ ಮಾಡಿರುವ ರೇಣುಕಾಚಾರ್ಯ, "ಬಿಜೆಪಿಗೆ ಹೆದರಿ ಪಟೇಲರಿಗೆ ಗೌರವ ತೋರಿದ ಕಾಂಗ್ರೆಸ್! ನವರ ಕರ್ಮಕಥೆ" ಎಂದಿದ್ದಾರೆ.
ವಿಡಿಯೋದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಡುವಿನ ಪಿಸು ದೃಶ್ಯ ವಿಡಿಯೋದಲ್ಲಿದೆ. ಸಿದ್ದರಾಮಯ್ಯ ಅವರು ಡಿಕೆಶಿ ಅವರನ್ನು ಉದ್ದೇಶಿಸಿ ಮಾತನಾಡಿದ್ದು, ಇವತ್ತು ವಲ್ಲಭಭಾಯಿ ಪಟೇಲ್ ಅವರದ್ದೂ ಜನ್ಮದಿನ ಅಂತೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಸರ್ ಅದು ಸ್ಮರಣೆ ಕಾರ್ಯಕ್ರಮ, ಅದು ಜನ್ಮದಿನ. ಎರಡು ಫೋಟೊ ಇಡುವುದಿಲ್ಲ ನಾವು ಎಂದಿದ್ದಾರೆ. ಆದರೆಮ ಬಿಜೆಪಿಯವರು ಇದರ ಲಾಭ ಪಡೆಯಬಹುದು ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ. ನಂತರ ಡಿಕೆಶಿ ಅವರು ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರವನ್ನು ಇರಿಸಲು ತಿಳಿಸಿದ್ದಾರೆ.
ಕಾಂಗ್ರೆಸ್ ಮುಖಂಡರಾದ ವಿ ಎಸ್ ಉಗ್ರಪ್ಪ ಹಾಗೂ ಎಂ. ಎ ಸಲೀಂ ಡಿಕೆಶಿ ಅವರ ಬಗ್ಗೆ ನಡೆಸಿದ್ದ ಸಂಭಾಷಣೆಯ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಿಂದ ಪಕ್ಷಕ್ಕೆ ಮುಜುಗರವುಂಟಾಗಿತ್ತು. ಇದಾದ ಬಳಿಕ ಪಕ್ಷದಿಂದ ಸಲೀಂ ಅವರನ್ನು ಉಚ್ಛಾಟನೆ ಮಾಡಲಾಗಿತ್ತು.