ಹೈದ್ರಾಬಾದ್, ನ.23 (DaijiworldNews/HR): ಹೈದ್ರಾಬಾದ್ನ ಎಲ್ಬಿ ನಗರ್ನಲ್ಲಿ ತಂದೆ ಕಾರು ನಿಲ್ಲಿಸುವಾಗ ನಾಲ್ಕು ವರ್ಷದ ಮಗುವೊಂದು ಅಡ್ಡ ಬಂದಿದ್ದು, ಇದರ ಬಗ್ಗೆ ಅರಿವಿಲ್ಲದ ಮಗುವಿನ ತಂದೆ ಮಗುವಿನ ಮೇಲೆ ಕಾರು ಹತ್ತಿಸಿರುವ ಘಟನೆ ನಡೆದಿದೆ.
ಅಪಾರ್ಟ್ಮೆಂಟ್ವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಲಕ್ಷಣ್ ಎಸ್ಯುವಿ ಕಾರನ್ನು ಒಳಗೆ ನಿಲ್ಲಿಸಲು ಮುಂದಾಗಿದ್ದು, ಈ ವೇಳೆ ಲಕ್ಷಣ್ ಹಿಂದೆಯೇ ನಾಲ್ಕು ವರ್ಷದ ಮಗ ಸಾತ್ವಿಕ್ ಓಡಿ ಬಂದು ರಸ್ತೆಯಲ್ಲಿ ಆಟವಾಡುತ್ತಿದ್ದ. ಕಾರ್ ಪಕ್ಕದಲ್ಲಿದ್ದ ಮಗು ಅಚಾನಕ್ ಆಗಿ ಮುಂದೆ ಬಂದಿದೆ. ಇದನ್ನು ತಿಳಿಯದ ಲಕ್ಷಣ್ ಕಾರನ್ನು ಮಗುವಿನ ಮೇಲೆ ಹತ್ತಿಸಿದ್ದು, ಇದು ಅವರ ಗಮನಕ್ಕೂ ಕೂಡ ಬಂದಿಲ್ಲ.
ಇನ್ನು ಈ ಎಲ್ಲಾ ಘಟನೆಯ ಸಂಪೂರ್ಣ ದೃಶ್ಯ ಅಪಾರ್ಟ್ಮೆಂಟ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.