ಮಧ್ಯಪ್ರದೇಶ, ನ.23 (DaijiworldNews/HR): ಶಾಲೆಯ ಬಸ್ ತಪ್ಪಿಹೋಗಿದ್ದಕ್ಕೆ ವಿಚಲಿತನಾದ 9ನೇ ತರಗತಿ ವಿದ್ಯಾರ್ಥಿಯೊಬ್ಬ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆತುಲ್ ಜಿಲ್ಲೆಯ ಅಮ್ದೋಹ್ ಗ್ರಾಮದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
14 ವರ್ಷದ ಬಾಲಕ ಖಾಸಗಿ ಶಾಲೆಯಲ್ಲಿ ಓದುತ್ತಿದ್ದು, ಸೋಮವಾರ ಬೆಳಿಗ್ಗೆ ಶಾಲೆಗೆ ಸಿದ್ಧವಾಗಿ ಮನೆಯಿಂದ ಹೊರಟಿದ್ದ. ಆದರೆ ಶಾಲೆಯ ಬಸ್ ತಪ್ಪಿ ಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಶಾಲೆಗೆ ರಜೆ ಮಾಡಲಿದ್ದ ಆತನಿಗೆ ಬಸ್ ಹೊರಟುಹೋಗಿದ್ದ ಕಾರಣ ಬೇಸರಗೊಂಡಿದ್ದ. ಮನೆಗೆ ಅಳುತ್ತಾ ವಾಪಸ್ಸಾಗಿದ್ದ. ನಂತರ ಮನೆಯ ಹಿಂದಿದ್ದ ಮಾವಿನ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಎಂದು ಕುಟುಂಸ್ಥರು ಮಾಹಿತಿ ನೀಡಿದ್ದಾರೆ.
ಬಾಲಕನು ಓದಿನಲ್ಲಿ ಮುಂದಿದ್ದು, ಮನೆಗೆ ಹಿಂತಿರುಗಿದ್ದ ಅವನು ಸಮವಸ್ತ್ರವನ್ನೂ ತೆಗೆಯದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.