ಬೆಂಗಳೂರು, ನ.23 (DaijiworldNews/HR): ಬೆಂಗಳೂರು ಪೋಲಿಸ್ನ ಮಹಿಳಾ ಪೇದೆಗಳು ಹೆಲ್ಮೇಟ್ ಇಲ್ಲದೇ ತ್ರಿಬಲ್ ರೈಡಿಂಗ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಪೋಲಿಸ್ನ ಮಹಿಳಾ ಪೇದೆಗಳು ತ್ರಿಬಲ್ ರೈಡಿಂಗ್ ಅನ್ನು ಹೆಲ್ಮೇಟ್ ಇಲ್ಲದೇ ಮಾಡ್ತ ಇರೋದನ್ನು ಹಾಗೂ ವಾಹನದ ಹಿಂಬದಿಯಲ್ಲಿ ಕುಳಿತಿರುವ ಮಹಿಳಾ ಪೋಲಿಸ್ ಸಿಬ್ಬಂದಿ ಹೆಲ್ಮೆಟ್ ಧರಿಸದೇ ಇರುವದ ವಿಡಿಯೋವನ್ನು ಮಹಿಳೆಯೊಬ್ಬರು ತಮ್ಮ ಪೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು ಪೊಲೀಸರ ಈ ವರ್ತನೆಗೆ ಸಾರ್ಬಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ನೀತಿ ಹೇಳುವವರು ನೀರಿನಲ್ಲಿ ನಿಂತುಕೊಂಡು ಮಾಡ್ತಾ ಇರೋದು ಏನು ಅಂತ ಜನತೆ ಪ್ರಶ್ನೆ ಮಾಡುತ್ತಿದ್ದು, ಪೊಲೀಸರ ನೈತಿಕತೆಯನ್ನು ಪ್ರಶ್ನೆ ಮಾಡುತ್ತಿದ್ದಾರೆ.