ಬೆಂಗಳೂರು, ನ. 22 (DaijiworldNews/SM): ರಾಜ್ಯದ 25 ಸ್ಥಾನಗಳಿಗೆ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿದೆ. ಅಳೆದು ತೂಗಿ ಎಂಬಂತೆ 17 ಮಂದಿಯ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ.
ಕೆಪಿಸಿಸಿ ಆಯ್ಕೆ ಮಾಡಿದ ಹೆಸರುಗಳನ್ನು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅನುಮೋದನೆ ಕೊಟ್ಟು ಅಂತಿಮ ಆಯ್ಕೆಯ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ :
ಗುಲ್ಬರ್ಗಾ(ಕಲಬುರಗಿ)- ಶಿವಾನಂದ ಪಾಟೀಲ್ ಮತ್ತೂರು
ಬೆಳಗಾವಿ- ಚನ್ನರಾಜ ಬಸವರಾಜ ಹಟ್ಟಿಹೊಳಿ
ಉತ್ತರ ಕನ್ನಡ- ಭೀಮಾನಾಯಕ್
ಹುಬ್ಬಳ್ಳಿ, ಧಾರವಾಡ, ಗದಗ, ಹಾವೇರಿ- ಸಲೀಂ ಅಹಮದ್
ರಾಯಚೂರು- ಶರಣಗೌಡ ಆನಂದಗೌಡ ಪಾಟೀಲ್
ಚಿತ್ರದುರ್ಗ- ಬಿ.ಸೋಮಶೇಖರ್
ಶಿವಮೊಗ್ಗ- ಪ್ರಸನ್ನ ಕುಮಾರ್
ದಕ್ಷಿಣ ಕನ್ನಡ- ಮಂಜುನಾಥ್ ಭಂಡಾರಿ
ಚಿಕ್ಕಮಗಳೂರು- ಗಾಯಿತ್ರಿ ಶಾಂತೇಗೌಡ
ಹಾಸನ್- ಎಂ.ಶಂಕರ್
ತುಮಕೂರು- ಎನ್. ರಾಜೇಂದ್ರ
ಮಂಡ್ಯ- ದಿನೇಶ್ ಗೂಳಿಗೌಡ
ಬೆಂಗಳೂರು(ಗ್ರಾ)- ಎಸ್. ರವಿ
ಕೊಡಗು- ಡಾ. ಮಂತಾರಗೌಡ
ಬಿಜಾಪುರ, ಬಾಗಲಕೋಟೆ - ಸುನೀಲ್ಗೌಡ ಪಾಟಿಲ್
ಮೈಸೂರು-ಚಾಮರಾಜನಗರ- ಡಾ.ಡಿ.ತಿಮ್ಮಯ್ಯ
ಬಳ್ಳಾರಿ- ಕೆ.ಸಿ.ಕೊಂಡಯ್ಯ