ಮೈಸೂರು, ನ.22 (DaijiworldNews/PY): ಕೆರೆ ಏರಿ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಲು ಹೋದ ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ಹೊಸಕೋಟೆ ಬಳಿಯ ಕೆಂಚನ ಕೆರೆಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಗಳನ್ನು ಅಬ್ದುಲ್ಲಾ (21) ಹಾಗೂ ತನ್ವೀರ್ (20) ಎಂದು ಗುರುತಿಸಲಾಗಿದೆ.
ಮೂವರು ಸ್ನೇಹಿತರು ಸೇರಿ ಸೆಲ್ಫಿಗೆ ನಿಂತಿದ್ದರು. ಈ ಸಂದರ್ಭ ಕಾಲುಜಾರಿ ಇಬ್ಬರು ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ಸೆಲ್ಫಿ ತೆಗೆಯುತ್ತಿದ್ದ ಯುವಕ ಪಾರಾಗಿದ್ದಾನೆ.
ಘಟನೆಯ ಬಗ್ಗೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.