ನವದೆಹಲಿ, ನ 22 (DaijiworldNews/MS): ಜನ್ -ಧನ್ ಖಾತೆಗಳಲ್ಲಿನ ಹಣ ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.
ಜನ್ ಧನ್ ಖಾತೆಗಳಲ್ಲಿನ ಹಣ ವರ್ಗಾವಣೆಯಲ್ಲಿ ಭ್ರಷ್ಟಾಚಾರದ ಅನುಮಾನದ ಕುರಿತು ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮೂಲಕ ಕೇಂದ್ರದ ಹರಿಹಾಯ್ದಿದ್ದಾರೆ. ಟ್ವೀಟ್ ಮಾಡಿರುವ ವರದಿಯಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜನ್ ಧನ್ ಖಾತೆದಾರರಿಂದ ಒಟ್ಟು 164 ಕೋಟಿ ರೂ. ಶುಲ್ಕವನ್ನು ವಿಧಿಸುವಾಗ ಜನ್ ಧನ್ ಖಾತೆಗಳಿಗೆ ಸಂಬಂಧಿಸಿದ ಷರತ್ತುಗಳನ್ನು ಉಲ್ಲಂಘಿಸಿದೆ ಎಂದು ವರದಿಗಳು ತಿಳಿಸಿವೆ. 2017 ಮತ್ತು ಸೆಪ್ಟೆಂಬರ್ 2020 ರ ನಡುವೆ, ಯುಪಿಐ ಮತ್ತು ರುಪೇ ಕಾರ್ಡ್ ಮೂಲಕ ವಹಿವಾಟುಗಳಿಗಾಗಿ ಬ್ಯಾಂಕ್ ಜನ್ ಧನ್ ಖಾತೆದಾರರಿಂದ ಒಟ್ಟು 254 ಕೋಟಿ ರೂ.ಗಳನ್ನು ಸಂಗ್ರಹಿಸಿದೆ ಎಂದಿದೆ.
ಮಾತ್ರವಲ್ಲದೆ ಈ ಅವಧಿಯಲ್ಲಿ ಬ್ಯಾಂಕ್ ಪ್ರತಿ ಖಾತೆದಾರರಿಂದ 17.70 ರೂಪಾಯಿಗಳನ್ನು ಕಡಿತಗೊಳಿಸಲಾಗುತ್ತಿದೆ ಎಂದು ಆರೋಪಿಸಿದ್ದು 'ಜನರ (ಜನ್) ಹಣವನ್ನು (ಧನ್) ಯಾರು ತೆಗೆದುಕೊಳ್ಳುತ್ತಿದ್ದಾರೆ?' ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.