ರಾಮನಗರ, ನ 22 (DaijiworldNews/MS): ಚೆನ್ನಪಟ್ಟಣದ ಬಳಿ ಸಂಸದ ಪ್ರತಾಪ್ ಸಿಂಹ ಕಾರು ಪಲ್ಟಿಯಾಗಿದ್ದು, ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಎಂಬುದಾಗಿ ವರದಿಯಾದ್ದು, ಈ ಸುದ್ದಿಯನ್ನು ಗಮನಿಸಿದ ಸಂಸದ ಪ್ರತಾಪ ಸಿಂಹ ನನ್ನ ಕಾರು ಪಲ್ಟಿಯಾಗಿಲ್ಲ, ಅಪಘಾತಗೊಂಡ ಕಾರಿನಲ್ಲಿದ್ದಂತ ಕುಟುಂಬವನ್ನು ರಕ್ಷಿಸಿದೆ. ಆ ಸ್ಥಳದಲ್ಲಿ ನನ್ನ ಕಂಡಂತ ಅನೇಕರು ಹೀಗೆ ಅಂದುಕೊಂಡು ಸುದ್ದಿಯಾಗಿದೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತು ಫೇಸ್ ಬುಕ್ ನಲ್ಲಿ ಲೈವ್ ಬಂದು ಸ್ಪಷ್ಟ ಪಡಿಸಿರುವಂತ ಅವರು, "ನನ್ನ ಕಾರು ಅಪಘಾತ ಉಂಟಾಗಿದೆ ಎಂಬುದಾಗಿ ಟಿವಿಗಳಲ್ಲಿ ನೋಡಿದಂತ ಅನೇಕ ಸ್ನೇಹಿತರು, ಅಭಿಮಾನಿಗಳು ಕರೆ ಮಾಡುತ್ತಿದ್ದು, ನಾನು ಬೆಂಗಳೂರಿನಿಂದ ಬರುತ್ತಾ ಇರುವಾಗ ಮದ್ದೂರಿನ ಹತ್ತಿರ ವೈಶಾಲಿ ಹೋಟೆಲ್ ಬಳಿ ಊಟಕ್ಕೆಂದು ನಿಲ್ಲಿಸಿದ್ದೆವು. ಜಗಲಿಯಂತಿದ್ದ ಕಟ್ಟೆಯ ಮೇಲೆ ಕುಳಿತು ಊಟ ಮಾಡ್ತಾ ಇದ್ದೆವು. ಆಗ ಮೈಸೂರಿನ ಕಡೆಯಿಂದ ಬರ್ತಾ ಇದ್ದಂತ ಇನ್ನೋವಾದ ಮುಂದಿನ ಕಾರು ಪಂಕ್ಚರ್ ಆಗಿ, ಪಲ್ಟಿಯಾಗಿತ್ತು. ಆಗ ಯಾರೂ ಸಹಾಯ ಮಾಡದೇ, ವಾಹನಗಳು ಅವರನ್ನು ನೋಡಿಕೊಂಡು ತೆರಳುತ್ತಾ ಇದ್ದದ್ದನ್ನು ಗಮನಿಸಿದ್ದು, ನಮ್ಮ ಗನ್ ಮ್ಯಾನ್ ಹಾಗೂ ಡೈವರ್ ಜೊತೆಗೆ ನಾನು ಓಡಿ ಹೋದೆವು. ಗ್ಲಾಸ್ ಹೊಡೆದು ಅದರಲ್ಲಿ ನಾಲ್ವರಿದ್ದರು. ಗಂಡ-ಹೆಂಡತಿ ಹಾಗೂ ಅವರ ಮಗಳು ಮತ್ತು ಡ್ರೈವರ್ ಇದ್ದರು. ಅವರನ್ನು ಹೊರಗೆ ಎಳೆದು, ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿ, ಅವರನ್ನು ಕರೆಸಿ, ಮಹಜರು ಮಾಡಿಸಿದೆ ಎಂದರು.
ಹಿಂದಿನ ವರದಿ:
ಮೈಸೂರು ಸಂಸದ ಪ್ರತಾಪ್ ಸಿಂಹ ತೆರಳುತ್ತಿದ್ದ ಕಾರು ಪಲ್ಟಿಯಾಗಿದೆ. ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದಾಗ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಕೂಕಿನ ಮುದುಗೆರೆ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ .ಅತೀ ವೇಗವಾಗಿ ಇದ್ದ ಫಾರ್ಚೂನರ್ ಕಾರು ಪಲ್ಟಿ ಹೊಡೆದಿದೆ.
ಅಪಘಾತದ ಪರಿಣಾಮ ಪ್ರತಾಪ್ ಸಿಂಹ ಮತ್ತು ಕಾರು ಚಾಲಕನಿಗೆ ಗಾಯಗಳಾಗಿವೆ ಎನ್ನಲಾಗಿದೆ. ಸಂಸದರ ಪತ್ನಿ, ಮಗಳು ಸೇರಿ ಆರು ಮಂದಿ ಕಾರಿನಲ್ಲಿ ಇದ್ದರು ಎನ್ನಲಾಗಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟನ ತಾಲೂಕಿನ ಮುದುಗೆರೆ ಬಳಿ ಘಟನೆ ನಡೆದಿದೆ.