ಪುಟ್ಟಪರ್ತಿ, ನ 22 (DaijiworldNews/MS): ಆಧುನಿಕ ಶಿಕ್ಷಣ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸಲು ಅಥವಾ ನೈತಿಕ ಮೌಲ್ಯ ಪೋಷಿಸಲು ಸಹಾಯ ಮಾಡುತ್ತಿಲ್ಲ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್ವಿ ರಮಣ ಸೋಮವಾರ ವಿಷಾದ ವ್ಯಕ್ತಪಡಿಸಿದ್ದಾರೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಪುಟ್ಟಪರ್ತಿಯಲ್ಲಿರುವ ಶ್ರೀ ಸತ್ಯಸಾಯಿ ಉನ್ನತ ಶಿಕ್ಷಣ ಸಂಸ್ಥೆಯ 40ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದ ಅವರು, ಆಧುನಿಕ ಶಿಕ್ಷಣ ತನ್ನ ಸ್ವರೂಪದಲ್ಲಿ ಪ್ರಯೋಜನವಾದಿಯಾಗಿದ್ದು ನೈತಿಕ ಮೌಲ್ಯ ಪೋಷಿಸಲು ಪ್ರಯೋಜನಕಾರಿಯಾಗಿಲ್ಲ ಎಂದು ಹೇಳಿದರು.
"ಆಧುನಿಕ ಶಿಕ್ಷಣ ವ್ಯವಸ್ಥೆಯು ಉಪಯೋಗಿತ್ವದ ಸುತ್ತ ಕೇಂದ್ರೀಕೃತವಾಗಿದ್ದು ವಿದ್ಯಾರ್ಥಿಯ ವ್ಯಕ್ತಿತ್ವ ರೂಪಿಸಲು ಮತ್ತು ಅವರಲ್ಲಿ ನೈತಿಕ ಮೌಲ್ಯ ಬಿತ್ತಲು ಇದು ಯೋಗ್ಯವಾಗಿಲ್ಲ. ತಾಳ್ಮೆ, ಪರಸ್ಪರ ತಿಳಿವಳಿಕೆ ಹಾಗೂ ಪರಸ್ಪರ ಗೌರವವನ್ನು ನಿಜವಾದ ಶಿಕ್ಷಣ ಬೆಳೆಸುತ್ತದೆ. ಮಾನವನ ನಿಜವಾದ ಅಂತರಂಗವನ್ನು ವಿಕಾಸಗೊಳಿಸಲು ಯೋಚಿಸಿ ಶೈಕ್ಷಣಿಕ ಯಾನ ಕೈಗೊಳ್ಳಿ" ಎಂದು ಸಿಜೆಐ ರಮಣ ಹೇಳಿದರು.