ಬೆಂಗಳೂರು,ನ.22 (DaijiworldNews/HR): ಈ ಬಾರಿಯ ಮಳೆಯಿಂದಾಗಿ ಅನೇಕ ಜಿಲ್ಲೆಗಳಲ್ಲಿ ಬೆಳೆ ಹಾನಿಯೊಂದಿಗೆ ಮನೆ ಹಾನಿಗೊಂಡಿದ್ದು, ಸಂಪೂರ್ಣ ಮನೆಹಾನಿಗೊಂಡಿದ್ದರೇ 1 ಲಕ್ಷ ರೂ ಪರಿಹಾರ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಈ ಕುರಿತು ಸುದ್ದಿಗಾರೊಂದಿಗೆ ಮಾಹಿತಿ ನೀಡಿರುವ ಅವರು, "ರಾಜ್ಯದಲ್ಲಿ ಮಳೆಯಿಂದ ಆದಂತ ಹಾನಿಯ ಸಂಬಂಧ ಬೆಳೆ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ನೀಡಲಾಗುವುದು. ಪೂರ್ಣ ಮನೆ ಹಾನಿಯಾಗಿದ್ದರೇ 1 ಲಕ್ಷ ರೂ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಲು ಸೂಚಿಸಿದ್ದೇನೆ" ಎಂದರು.
ಇನ್ನು ರಾಜ್ಯದ ಕೋಲಾರ, ಹೊಸಕೋಟೆಯಲ್ಲಿ ಮಳೆಯಿಂದ ಅನೇಕ ಹಾನಿಯಾಗಿದ್ದು, ಪ್ರವಾಹ ಕೂಡ ಉಂಟಾಗಿದೆ. ಈ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ, ಪರಿಶೀಲನೆ ನಡೆಸುತ್ತೇನೆ" ಎಂದು ಹೇಳಿದ್ದಾರೆ.