ನವದೆಹಲಿ, ನ 22 (DaijiworldNews/MS): ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ತಮ್ಮ ಪ್ರತಿಭಟನೆಯನ್ನು ಪ್ರಾರಂಭಿಸಿದಾಗಿನಿಂದಲೂ ರೈತರ ಹಕ್ಕುಗಳ ಧ್ವನಿಯನ್ನು ಬೆಂಬಲಿಸುತ್ತಿರುವ ನಟ ಪ್ರಕಾಶ್ ರಾಜ್, "ರೈತರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೊಣೆಯನ್ನು ಹೊರಬೇಕು" ಎಂದು ಭಾನುವಾರದಂದು ನಡೆದ ಪ್ರತಿಭಟನೆಯಲ್ಲಿ ಎಂದು ಹೇಳಿದ್ದಾರೆ.
ತೆಲಂಗಾಣ ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ಕೆ.ಟಿ. ರಾಮರಾವ್ ಹಾಗೂ ನಟ ಪ್ರಕಾಶ್ ರಾಜ್ ಅವರು ತಮ್ಮ ಟ್ವೀಟ್ನಲ್ಲಿ, "ಪ್ರಿಯ ಪ್ರಧಾನಿ, ಕ್ಷಮಿಸಿ ಅಂದರೆ ಸಾಕಾಗುವುದಿಲ್ಲ... ನೀವು ಜವಾಬ್ದಾರಿಯನ್ನು ಪರಿಹಾರ ಕ್ರಮಗಳನ್ನು ನಿಭಾಯಿಸುತ್ತೀರಾ.? "ಎಂದು ಪ್ರಶ್ನಿಸಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಬಗ್ಗೆ ಹೆಮ್ಮೆಯಿದೆ . ಅವರು ಕೃಷಿ ಕಾನೂನುಗಳ ವಿರುದ್ಧ ಹೋರಾಡಿ ಪ್ರಾಣ ಕಳೆದುಕೊಂಡ 750ಕ್ಕೂ ಹೆಚ್ಚು ರೈತರಿಗೆ 3 ಲಕ್ಷ ರೂ. ಘೋಷಿಸಿದ್ದಾರೆ ಎಂದು ಟ್ವೀಟ್ನಲ್ಲಿ ರಾಮರಾವ್ ಹೇಳಿದ್ದಾರೆ.
ತೆ"ಲಂಗಾಣ ಮುಖ್ಯಮಂತ್ರಿ , ಕೇಂದ್ರ ಸರ್ಕಾರವು ಪ್ರತಿಯೊಬ್ಬ ರೈತರ ಕುಟುಂಬಗಳಿಗೆ 25 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಬೇಕು ಮತ್ತು ಅವರ ಮೇಲಿನ ಎಲ್ಲಾ ಪ್ರಕರಣಗಳನ್ನು ಬೇಷರತ್ತಾಗಿ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ" ಎಂದು ಸಚಿವರು ಹೇಳಿದ್ದಾರೆ.