ಬೆಂಗಳೂರು, ನ.22 (DaijiworldNews/HR): ಉದ್ಯಮಿ ಆನಂದ್ ಮಹೀಂದ್ರಾ ಅವರ ಹೆಸರಿನಲ್ಲಿ ನಕಲಿ ಹೇಳಿಕೆ ಇರುವ ಕೋಟ್ ಪೋಸ್ಟ್ಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ತಮ್ಮ ಬಗೆಗೆ ಹರಿದಾಡಿರುವ ಕೋಟ್ ಒಂದರ ಕುರಿತು ಅಸಮಾಧಾನ ಹೊರಹಾಕಿದ್ದಾರೆ.
ಕೋಟ್ ಪೋಸ್ಟ್ ಮಾಡಿದ್ದ ಇನ್ಸ್ಟಾಗ್ರಾಂ ಖಾತೆಯ ಸ್ಕ್ರೀನ್ಶಾಟ್ ಆನ್ನು ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಇಂತಹ ಹಲವಾರು ನಕಲಿ ಕೋಟ್ ಇರುವ ಪೋಸ್ಟ್ಗಳು ಇದ್ದು, ಅವುಗಳನ್ನು ನಾವೇ ಸ್ವತಃ ಹೇಳಿರುವಂತೆ ಬಿಂಬಿಸಲಾಗುತ್ತಿದ್ದು ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಸೂಕ್ತ ಕಾನೂನು ಕ್ರಮದ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ಆನಂದ್ ಮಹೀಂದ್ರಾ ನೀಡಿದ್ದಾರೆ.