ನವದೆಹಲಿ, ನ 22 (DaijiworldNews/MS): ಫೆಬ್ರವರಿ 27, 2019 ರಂದು ವೈಮಾನಿಕ ಯುದ್ಧದಲ್ಲಿ ಪಾಕಿಸ್ತಾನದ F-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದಕ್ಕಾಗಿ ವಿಂಗ್ ಕಮಾಂಡರ್ (ಪ್ರಸ್ತುತ ಗ್ರೂಪ್ ಕ್ಯಾಪ್ಟನ್ ) ಅಭಿನಂದನ್ ವರ್ಧಮಾನ್ ಅವರಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ನ.22ರ ಇಂದು ವೀರ ಚಕ್ರವನ್ನು ಪ್ರದಾನ ಮಾಡಲಿದ್ದಾರೆ.
ಪುಲ್ವಾಮಾ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ವಾಯುಪಡೆಗಳ ನಡುವಿನ ವೈಮಾನಿಕ ಕಾಳಗದಲ್ಲಿ ವರ್ಧಮಾನ್ ಪಾಕಿಸ್ತಾನದ ಯುದ್ಧ ವಿಮಾನದೊಂದಿಗೆ ಯುದ್ಧದಲ್ಲಿ ತೊಡಗಿದ್ದರು. ಈ ವೇಳೆ ವರ್ಧಮಾನ್ ಅವರು ಪಾಕ್ ನ ಎಫ್ -16 ಯುದ್ದ ವಿಮಾನವನ್ನು ಯುದ್ದ ಅನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹೊಡೆದುರುಳಿಸಿದ್ದರು. ಎಫ್ -16 ಯುದ್ದ ವಿಮಾನ ಹೊಡೆದುರುಳಿಸಿದ ಏಕೈಕ MiG-21 ಪೈಲೆಟ್ ಎಂಬ ಹೆಗ್ಗಳಿಕೆಗೆ ವರ್ಧಮಾನ್ ಪಾತ್ರವಾಗಿದ್ದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭೂಪ್ರದೇಶದಲ್ಲಿ ಇದ್ದ ಅವರನ್ನು ಪಾಕಿಸ್ತಾನ ಸೇನೆಯು ವಶಕ್ಕೆ ತೆಗೆದುಕೊಂಡಿತು.
ಈ ವಿಷಯದಲ್ಲಿ ಅಂತರರಾಷ್ಟ್ರೀಯ ಹಸ್ತಕ್ಷೇಪದ ಜೊತೆಗೆ ಭಾರತದ ಕಡೆಯಿಂದ ಹೇರಿದ ವ್ಯಾಪಕ ಒತ್ತಡದಿಂದಾಗಿ ಪಾಕಿಸ್ತಾನದ ಸೇನೆಯು ಅವರನ್ನು ಬಿಡುಗಡೆ ಮಾಡಿತು. ವಿಂಗ್ ಕಮಾಂಡರ್ ಆಗಿದ್ದ ವರ್ಧಮಾನ್ ಅವರಿಗೆ ಇದೇ ನವೆಂಬರ್ 3 ರಂದು ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಬಡ್ತಿ ನೀಡಲಾಯಿತು.