ಮಥುರಾ, ನ.22 (DaijiworldNews/PY): ರೈಲು ಹಳಿ ಮೇಲೆ ಪಬ್ ಜಿ ಆಡುತ್ತಿದ್ದ ಇಬ್ಬರು ಬಾಲಕರ ಮೇಲೆ ರೈಲು ಹರಿದು ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಮಥುರಾದ ಲಕ್ಷ್ಮೀನಗರದಲ್ಲಿ ನಡೆದಿದೆ.
ಮೃತ ಬಾಲಕರನ್ನು ಕಪಿಲ್ (18) ಹಾಗೂ ರಾಹುಲ್ (16) ಎಂದು ಗುರುತಿಸಲಾಗಿದೆ.
ಮಥುರಾ ಕಂಟೋನ್ಮೆಂಟ್ ಹಾಗೂ ರಾಯಾ ರೈಲು ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿದೆ. ಇಬ್ಬರೂ 10ನೇ ತರಗತಿ ವಿದ್ಯಾರ್ಥಿಗಳಾಗಿದ್ದರು. ಘಟನಾ ಸ್ಥಳದಲ್ಲಿ ಎರಡು ಮೊಬೈಲ್ಗಳು ದೊರಕಿವೆ. ಒಂದು ಮೊಬೈಲ್ ಹಾನಿಗೊಂಡಿದ್ದು, ಮತ್ತೊಂದು ಮೊಬೈಲ್ನಲ್ಲಿ ಪಬ್ ಜಿ ಆಟ ಚಾಲೂ ಸ್ಥಿತಿಯಲ್ಲೇ ಇತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಳಗ್ಗೆ ಕಪಿಲ್ ಹಾಗೂ ರಾಹುಲ್ ರೈಲು ಹಳಿ ಮೇಲೆ ವಾಹುವಿಹಾರಕ್ಕೆ ತೆರಳಿದ್ದರು. ಬಳಿಕ ಅಲ್ಲಿಯೇ ಕುಳಿತು ಕಿವಿಗೆ ಹೆಡ್ಫೋನ್ ಹಾಕಿ ಪಬ್ಜಿ ಆಡುತ್ತಿದ್ದರು. ಇಬ್ಬರು ವಿದ್ಯಾರ್ಥಿಗಳು ರೈಲು ಹಳಿ ಬಳಿ ಹೋಗಿದ್ದು ತಿಳಿಯಲೇ ಇಲ್ಲ. ಅತ್ತ ರೈಲಿನ ಶಬ್ದ ಕೂಡ ಕೇಳಿಸಿಲ್ಲ. ಹೆಡ್ಫೋನ್ ಹಾಕಿದ್ದ ಕಾರಣ ಅವರಿಗೆ ರೈಲಿನ ಶಬ್ದ ಕೇಳಿಸಿಲ್ಲ. ಈ ಸಂದರ್ಭ ರೈಲು ಹರಿದು ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಜಮುನಾ ಫಾರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಘಟನೆಯ ಬಗ್ಗೆ ಜಮುನಾಪಾರ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.