ಮಂಡ್ಯ, ನ.21 (DaijiworldNews/HR): ರಾಜ್ಯ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆಯೇ ಪೈಪೋಟಿ ಆರಂಭವಾಗಿದ್ದು, ಇಬ್ಬರ ನಡುವೆ ಪಂದ್ಯ ನಡೆದರೆ ಸಿದ್ದರಾಮಯ್ಯನವರೇ ಗೆಲ್ಲುತ್ತಾರೆ. ಸುಳ್ಳು ಹೇಳಲು ನೊಬೆಲ್ ಪ್ರಶಸ್ತಿ ಇಟ್ರೆ ಸಿದ್ದರಾಯ್ಯನವರೇ ಗೆಲ್ಲುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಜನಸ್ವರಾಜ್ ಅಲ್ಲ ಜನ ಬರ್ಬಾದ್ ಯಾತ್ರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಈಶ್ವರಪ್ಪ, "ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಸರ್ಕಾರವನ್ನೇ ಕಿತ್ತಾಕಿದ್ದೇವೆ, ಕಾಂಗ್ರೆಸ್ ಬರ್ಬಾದ್ ಆಗಿದ್ದು, ಬಿಜೆಪಿ ಸರ್ಕಾರದ ಬಗ್ಗೆ ಸಿದ್ದರಾಮಯ್ಯನವರ ಹೇಳಿಕೆ ಹಾಸ್ಯಾಸ್ಪದವಾಗಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಪ್ರಧಾನಿ ಮೋದಿ ಸರ್ಕಾರ ಹಳ್ಳಿಗಳಿಗೆ ವ್ಯಾಕ್ಸಿನ್ ಕೊಟ್ಟರೆ ಡಿ.ಕೆ.ಶಿ ಹಾಗೂ ಸಿದ್ದರಾಮಯ್ಯ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಡಿ. ಅದರಿಂದ ತೊಂದರೆಯಾಗುತ್ತೆ ಎಂದು ಜನರನ್ನು ತಪ್ಪು ದಾರಿಗೆಳೆಯಲು ಮುಂದಾದರು. ಕೊನೆಗೆ ಜನರೇ ಜಾಗೃತರಾಗಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ" ಎಂದರು.