ಕಲಬುರಗಿ, ನ.21 (DaijiworldNews/HR): ಲೂಟಿ ಗ್ಯಾಂಗ್ ಖರ್ಗೆ ಅಂಗಡಿ ಬಂದ್ ಆಗಿದೆ, ಎಂಬ ನಳೀನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ದೆಹಲಿಯಲ್ಲಿ ಕುಳಿತಿರುವ ಅವರ ಗುರು ಮೋದಿ ಕೇಳಿದರೆ ಸೂಕ್ತ ಉತ್ತರ ನೀಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಟೀಲ್ ಅವರ ಹೇಳಿಕೆ ಪಕ್ಷದ ಸಂಸ್ಕೃತಿಯನ್ನು ತೋರಿಸುತ್ತದೆ. ಏನಾದರೂ ಪ್ರಶ್ನಿಸಿದರೆ ಟಿಂಗಲ್ ಉಡಾಯಿಸುವುದನ್ನು ಕಲಿತಿದ್ದಾರೆ. ಅವರಿಗೆ ನಮ್ಮ ಪಕ್ಷದ ರಾಜ್ಯ ನಾಯಕರು ಸೂಕ್ತ ಉತ್ತರ ನೀಡುತ್ತಾರೆ" ಎಂದರು.
ಇನ್ನು "ಮೂರು ಕೃಷಿ ಕಾಯ್ದೆಗಳನ್ನು ಮೋದಿ ರೈತರ ಒತ್ತಡಕ್ಕೆ ಮಣಿದು ಹಿಂದಕ್ಕೆ ಪಡೆದಿಲ್ಲ. ಈಗ ಏಕಾಏಕಿ ಬಂದಿರುವ ರೈತರ ಬಗೆಗಿನ ಕಾಳಜಿ 700 ರೈತರು ತೀರಿಕೊಳ್ಳುವಾಗ ಎಲ್ಲಿ ಹೋಗಿತ್ತು. ಚುನಾವಣೆ ಬಂದಿದೆ ಎಂದು ಈಗ ಹಿಂದಕ್ಕೆ ಪಡೆದುಕೊಳ್ಳುತ್ತಿದ್ದಾರೆ" ಎಂದು ಹೇಳಿದ್ದಾರೆ.