ಲಖನೌ, ನ.21 (DaijiworldNews/HR): ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆ ಉದ್ದೇಶಕ್ಕಾಗಿ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿಲ್ಲ, ಕಾಯ್ದೆಗಳಿಗೆ ಚುನಾವಣೆಗಳೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.
ಈ ಕುರಿರು ಮಾತನಾಡಿದ ಅವರು, "ಕಾಯ್ದೆಗಳಿಗಿಂತಲೂ ದೇಶವನ್ನೇ ಮೊದಲ ಆಯ್ಕೆಯನ್ನಾಗಿ ಮಾಡಿ ತಪ್ಪು ಉದ್ದೇಶಗಳಿಗೆ ಹೊಡೆತ ನೀಡಿದ್ದಕ್ಕಾಗಿ ಪ್ರಧಾನಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ" ಎಂದರು.
ಇನ್ನು ಕೇಂದ್ರವು ಕಳೆದ ವರ್ಷ ರೂಪಿಸಿದ್ದ ಮೂರು ಕೃಷಿ ಕಾಯ್ದೆಗಳನ್ನು ರೈತರ ಭಾರಿ ವಿರೋಧದ ಕಾರಣ ರದ್ದುಪಡಿಸುವುದಾಗಿ ಮೋದಿ ಅವರು ಶುಕ್ರವಾರ ಘೋಷಿಸಿದ್ದರು.