ನವದೆಹಲಿ, ನ 20 (DaijiworldNews/MS): ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ಪಾಕಿಸ್ತಾನದ ಪ್ರಧಾನಿಯನ್ನು ನನ್ನ ಹಿರಿಯ ಸಹೋದರ( ಬಡಾ ಭಾಯ್ ) ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ನಾಯಕ ಅಮಿತ್ ಮಾಳವಿಯಾ ಅವರು ಶನಿವಾರ ನವಜೋತ್ ಸಿಂಗ್ ಸಿಧು ಅವರ ವಿವಾದಾತ್ಮಕ ಹೇಳಿಕೆಯ ವೀಡಿಯೊವನ್ನು ಟ್ವೀಟ್ ಮಾಡಿದ್ದು, ರಾಹುಲ್ ಗಾಂಧಿಯವರ ನೆಚ್ಚಿನ ನವಜೋತ್ ಸಿಂಗ್ ಸಿಧು ಅವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು “ಬಡಾ ಭಾಯ್” ಎಂದು ಕರೆಯುತ್ತಿದ್ದಾರೆ. ಕಳೆದ ಬಾರಿ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಬಾಜ್ವಾ ಅವರನ್ನು ತಬ್ಬಿಕೊಂಡು ಪ್ರಶಂಸಿಸಿದ್ದರು" ಎಂದು ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ.
ಕರ್ತಾರ್ಪುರ ಗುರುದ್ವಾರಕ್ಕೆ ಭೇಟಿ ನೀಡಿದ ನವಜೋತ್ ಸಿಂಗ್ ಅವರು, ಕರ್ತಾರ್ಪುರ ಅಧಿಕಾರಿಯೊಬ್ಬರನ್ನು ಭೇಟಿಯಾಗುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ನವಜೋತ್ ಸಿಂಗ್ ಸಿಧು ಅವರನ್ನು ಅಧಿಕಾರಿಗಳು ಹೂಮಾಲೆ ಹಾಕಿ ಸ್ವಾಗತಿಸುವ ವೇಳೆ, ಈ ದಿನಕ್ಕಾಗಿ ನಾವು ಇಷ್ಟು ದಿನ ಕಾಯುತ್ತಿದ್ದೇವು. ನನಗೆ ನಿಮ್ಮ ಮೇಲೆ ಗೌರವವಿದೆ. ಇಮ್ರಾನ್ ಖಾನ್ ಅವರು ನನ್ನ ಹಿರಿಯ ಸಹೋದರ. ತುಂಬಾ ಧನ್ಯವಾದ ಎಂದು ಹೇಳುವುದನ್ನು ವೀಡಿಯೋದಲ್ಲಿ ಹೆಳಿರುವುದನ್ನು ನೋಡಬಹುದಾಗಿದೆ
ನವಜೋತ್ ಸಿಂಗ್ ಸಿಧು ಈ ಹಿಂದೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲೂ ಪಾಲ್ಗೊಂಡಿದ್ದರು.