ತಮಿಳುನಾಡು, ನ.20 (DaijiworldNews/PY): ಲೈಂಗಿಕ ಕಿರುಕುಳದಿಂದ ನೊಂದು 17 ವರ್ಷದ ಬಾಲಕಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಕರೂರಿನಲ್ಲಿ ನಡೆದಿದೆ.
12ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಶುಕ್ರವಾರ ಸಂಜೆ ಮನೆಗೆ ಬಂದ ಬಳಿಕ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಸಂದರ್ಭ ಬಾಲಕಿಯ ತಾಯಿ ಮನೆಯಲ್ಲಿ ಇರಲಿಲ್ಲ. ಘಟನೆಯನ್ನು ನೋಡಿದ ಪಕ್ಕದ ಮನೆಯ ಮಹಿಳೆಯೊಬ್ಬರು ಬಾಲಕಿಯ ತಾಯಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿ ಹೇಳಿದೆ.
ಬಾಲಕಿ ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿದ್ದು, ಕರೂರ್ ಜಿಲ್ಲೆಯಲ್ಲಿ ಲೈಂಗಿಕ ಕಿರುಕುಳದಿಂದ ಸಾಯುವ ಕೊನೆಯ ಹುಡುಗಿ ನಾನೇ ಆಗಿರಬೇಕು. ನನ್ನ ಈ ತೀರ್ಮಾನಕ್ಕೆ ಯಾರು ಕಾರಣ ಎಂದು ಹೇಳಲು ನನಗೆ ಭಯವಾಗಿದೆ. ನಾನು ಇತರರಿಗೆ ಸಹಾಯ ಮಾಡಬೇಕೆಂದು ಇಚ್ಛಿಸಿದ್ದೆ. ಆದರೆ, ನಾನು ಇಷ್ಟು ಬೇಗ ಇಹಲೋಕ ತ್ಯಜಿಸುವಂತಾಗಿದೆ ಎಂದು ಬರೆದಿದ್ದಾಳೆ.
ಕೊಯಮತ್ತೂರು ಜಿಲ್ಲೆಯಲ್ಲಿ ಕಳೆದ ವಾರ ಶಾಲಾ ಶಿಕ್ಷಕರ ಲೈಂಗಿನ ಕಿರುಕುಳ ತಾಳಲಾರದೆ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಳು. ತಮಿಳುನಾಡುನಲ್ಲಿ ಲೈಂಗಿಕ ಕಿರುಕುಳದಿಂದ ಇತ್ತೀಚೆಗೆ ನಡೆದ ಎರಡನೇ ಆತ್ಮಹತ್ಯೆ ಪ್ರಕರಣ ಇದಾಗಿದೆ.