ಲಕ್ನೋ, ನ 20 (DaijiworldNews/MS): ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದ ಬೆನ್ನಲ್ಲೇ ಪಂಜಾಬ್, ಉತ್ತರಪ್ರದೇಶ ಚುನಾವಣೆ ಹತ್ತಿರ ಬಂದ ಕಾರಣ ಕೇಂದ್ರ ಸರ್ಕಾರ ಕಾಯ್ದೆಗಳನ್ನು ವಾಪಸ್ ಪಡೆದಿದೆ ಎಂದು ವಿಪಕ್ಷಗಳ ವಾಗ್ದಾಳಿಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕುಟುಂಬ ರಾಜಕಾರಣ ಮಾಡುವವರಿಗೆ ರೈತರು ತೊಂದರೆಯಲ್ಲಿ ಸಿಲುಕಿರುವುದೇ ಬೇಕಾಗಿದ್ದು, ರೈತರ ಹೆಸರಲ್ಲಿ ದೊಡ್ಡ ಘೋಷಣೆ ಮಾಡುತ್ತಾರೆ. ಆದರೆ ಅವರಿದ್ದಲ್ಲಿಗೆ ಯಾರೂ ಹೋಗುವುದಿಲ್ಲ. ನಮ್ಮ ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ ರೈತರ ಕಷ್ಟಗಳಿಗೆ ಸ್ಪಂದಿಸಿದೆ ಎಂದು ತಿರುಗೇಟು ನೀಡಿದ್ದಾರೆ.
ಉತ್ತರಪ್ರದೇಶ ಮಹೋಬಾದಲ್ಲಿ ಸಾರ್ವಜನಿಕ ಸಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರನ್ನು ಯಾವಗಲೂ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಸುವುದೇ ಹಲವು ರಾಜಕೀಯ ಪಕ್ಷಗಳ ಕೆಲಸವಾಗಿದೆ. ಇದರ ಮೇಲೆಯೆ ತಮ್ಮ ಪಕ್ಷದ ತಳಹದಿ ಭದ್ರಪಡಿಸಿಕೊಂಡಿದ್ದಾರೆ. ಮತ್ತೊಂದೆಡೆ ಕುಟುಂಬದ ಸದಸ್ಯರನ್ನೊಳಗೊಂಡ ರಾಜಕೀಯ ಪಕ್ಷಗಳಿದ್ದೂ ಅವರಿಗೂ ರೈತರ ಸಮಸ್ಯೆಗಳ ಬಗ್ಗೆ ಕಾಳಜಿಯಿಲ್ಲ. ಅನ್ನದಾತರ ಅಗತ್ಯಗಳನ್ನು ಪೂರೈಸುವುದು ಅವರಿಗೆ ಬೇಕಾಗಿಲ್ಲ ಎಂದು ಆರೋಪಿಸಿದರು.
ಕೆಲವು ರಾಜಕೀಯ ಪಕ್ಷಗಳು ಅನ್ನದಾತರ ಹೆಸರಿನಲ್ಲಿ ದೊಡ್ಡ ದೊಡ್ಡ ಘೋಷಣೆ ಕೂಗುತ್ತಾರೆ. ಆದರೆ ರೈತರ ಬಳಿ ಅವರ ಸಮಸ್ಯೆಗೆ ಪರಿಹಾರ ನೀಡಲು ಯಾರು ಹೋಗುವುದಿಲ್ಲ. ನಮ್ಮ ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ 1.62 ಕೋಟಿ ರೂಪಾಯಿಯನ್ನು ರೈತರ ಅಕೌಂಟ್ಗೆ ನೇರವಾಗಿ ಹಾಕಿದೆ ಎಂದು ಹೇಳಿದರು