ಬೆಂಗಳೂರು, ನ.20 (DaijiworldNews/HR): ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಹಾಗಾಗಿ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪೇಜಾವರ ಶ್ರೀಗಳ ಬಗ್ಗೆ ಹೇಳಿಕೆ ನೀಡಿದ ಹಂಸಲೇಖ ಅವರಿಗೆ ಈಗಾಗಲೇ ಪೊಲೀಸರು ಎರಡು ಬಾರಿ ನೋಟೀಸ್ ನೀಡಿದ್ದು, ಕಾನೂನಿನ ಪ್ರಕಾರ ತನಿಖೆ ನಡೆಯುತ್ತಿದೆ" ಎಂದರು.
ಇನ್ನು ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಹಾಗಾಗಿ ಎಲ್ಲರಂತೆ ಸಂಗೀತ ನಿರ್ದೇಶಕ ಹಂಸಲೇಖ ಕೂಡ ಕಾನೂನಿನಡಿ ಬರುತ್ತಾರೆ. ಅವರು ಒಬ್ಬ ಪ್ರತಿಭಾವಂತ ವ್ಯಕ್ತಿ. ಹಾಗಂತ ಕಾನೂನಿಗಿಂತ ದೊಡ್ಡವರಲ್ಲ" ಎಂದು ಹೇಳಿದ್ದಾರೆ.