ಮೈಸೂರು, ನ.20 (DaijiworldNews/PY): "ಕಾಂಗ್ರೆಸ್ನದ್ದು ಪರ್ಸೆಂಟೇಜ್ ಸರ್ಕಾರ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಅದರ ಕಿಂಗ್. ನಮ್ಮ ಸರ್ಕಾರದ ಬಗ್ಗೆ ಅವರೇನು ಟೀಕೆ ಮಾಡುವುದು" ಎಂದು ಸಚಿವ ಕೆ ಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಶನಿವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಗುತ್ತಿಗೆದಾರರ ಸಂಘದವರು ಪರ್ಸೆಂಟೇಜ್ ಆರೋಪದ ಬಗ್ಗೆ ದಾಖಲೆ ನೀಡಿದ್ದಲ್ಲಿ ತನಿಖೆ ನಡೆಸಲಾಗುವುದು" ಎಂದು ತಿಳಿಸಿದ್ದಾರೆ.
ಮಳೆಯ ಪರಿಣಾಮ ಭಾರಿ ಅನಾಹುತ ಆಗಿದ್ದರೂ ಸಹ ಬಿಜೆಪಿಯವರು ಸಮಾವೇಶ ನಡೆಸಿ ಶಂಖ ಊದುತ್ತಿದ್ದಾರೆ ಎನ್ನುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಜೆಡಿಎಸ್ ಪಕ್ಷದಲ್ಲಿ ಶಂಖ ಊದುವುದಕ್ಕೆ ಯಾರೂ ಸಹ ಇಲ್ಲದಂತ ಪರಿಸ್ಥಿತಿ ಉಂಟಾಗಿದೆ. ಜೆಡಿಎಸ್ನವರು ವಿಧಾನಪರಿಷತ್ ಚುನಾವಣೆಯಲ್ಲಿ ಎಷ್ಟು ಮಂದಿ ಅಭ್ಯರ್ಥಿಗಳನ್ನು ಹಾಕುತ್ತಾರೆ ಎನ್ನುವುದನ್ನು ನೋಡೋಣ" ಎಂದು ಹೇಳಿದ್ದಾರೆ.
"ಈ ಬಾರಿ ನಾವು ವಿಧಾನಪರಿಷತ್ ಚುನಾವಣೆಯಲ್ಲಿ 15-16ಸ್ಥಾನ ಗೆಲ್ಲಲಿದ್ದೇವೆ. ಈ ಮುಖೇನ ಬಿಜೆಪಿ ವಿಧಾನಪರಿಷತ್ನಲ್ಲೈ ಬಹುಮತ ಹೊಂದಲಿದೆ" ಎಂದಿದ್ದಾರೆ.