ನವದೆಹಲಿ, ನ 20 (DaijiworldNews/MS): ಜಾರ್ಖಂಡ್ ನ ಧನ್ ಬಾದ್ ವಿಭಾಗದ ಗರ್ವಾ ಮತ್ತು ಬರ್ಕಾನಾ ನಡುವಿನ ರೈಲು ಹಳಿಗಳ ಮೇಲೆ ಶನಿವಾರ ಮುಂಜಾನೆ ಬಾಂಬ್ ಸ್ಫೋಟಿಸಲಾಗಿದ್ದು, ಡೀಸೆಲ್ ಲೊಕೋಮೋಟಿವ್ ಹಳಿ ತಪ್ಪಿದೆ ಎಂದು ಧನ್ ಬಾದ್ ರೈಲ್ವೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಗರ್ವಾ ರಸ್ತೆ ಮತ್ತು ಬರ್ಕಾನಾ ನಡುವೆ ಡೀಸೆಲ್ ಲೊಕೋಮೋಟಿವ್ ಚಲಿಸುತ್ತಿದ್ದ ವೇಳೆ ಬಾಂಬ್ ಸ್ಫೋಟಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಸಾವು ನೋವು ವರದಿಯಾಗಿಲ್ಲ.
ನಕ್ಸಲರು ಈ ರೈಲ್ವೆ ಹಳಿಯನ್ನು ಸ್ಪೋಟಿಸುವ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.