ನವದೆಹಲಿ, ನ.19 (DaijiworldNews/HR): ಮೂರು ಕೃಷಿ ಕಾಯ್ದೆಗಳಿಂದ ರೈತರಿಗೆ ಭಾರಿ ನೋವು ಉಂಟಾಗಿದ್ದು, ಪ್ರಧಾನಿ ರೈತರ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ನ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮುಂಬರುವ ಚುನಾವಣೆಗಳಲ್ಲಿ ಎದುರಾಗಬಹುದಾದ ಸೋಲಿನ ಭಯದಿಂದಾಗಿ ಪ್ರಧಾನಿ ಮೋದಿ ಅವರು ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವುದಾಗಿ ನಿರ್ಧರಿಸಿದ್ದಾರೆ" ಎಂದರು.
ಇನ್ನು "ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು, ರೈತರ ಆದಾಯ ದ್ವಿಗುಣ ಮಾಡಲು ಹಾಗೂ ಅವರನ್ನು ಸಾಲ ಮುಕ್ತರಾಗಿಸಲು ಯಾವ ಮಾರ್ಗಗಳನ್ನು ಅನುಸರಿಸುತ್ತಿದ್ದೀರಿ" ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯಲ್ಲಿರುವ ರೈತ ವಿರೋಧಿ ಮತ್ತು ಬಂಡವಾಳಶಾಹಿ ಸ್ನೇಹ ಶಕ್ತಿಗಳು ಅಂತಿಮವಾಗಿ ಸೋತಿದ್ದು, ಇಂದು ಮೋದಿಯ ಅಹಂಕಾರದ ಸೋಲಿನ ದಿನವಾಗಿದೆ ಎಂದು ಹೇಳಿದ್ದಾರೆ.