ಬೆಂಗಳೂರು, ನ.19 (DaijiworldNews/HR): ನಮ್ಮದು ಸ್ಪಂದನಶೀಲ ಸರ್ಕಾರ, ಹಾಗಾಗಿ ರೈತರ ಭಾವನೆಗೆ ಸ್ಪಂದಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮೂರು ಕೃಷಿ ಕಾಯ್ದೆ ಹಿಂಪಡೆದ ಕುರಿತು ಪ್ರತಿಕ್ರಿತಿಸಿದ ಅವರು, ನಮ್ಮದು ಸ್ಪಂದನಶೀಲ ಸರ್ಕಾರ, ಹಾಗಾಗಿ ರೈತರ ಭಾವನೆಗೆ ಸ್ಪಂದಿಸಿದ್ದೇವೆ. ಬದಲಾಗಿ ಪಂಚರಾಜ್ಯ ಚುನಾವಣಾ ಹಿನ್ನೆಲೆಯಲ್ಲಿ ವಾಪಸ್ ಪಡೆದಿಲ್ಲ. ಪಂಚರಾಜ್ಯ ಚುನಾವಣೆಗೂ ಇದಕ್ಕೂ ಸಂಬಂಧವಿಲ್ಲ. ಹಿಂದೆ ನಡೆದ ಚುನಾವಣೆಯಲ್ಲೂ ನಾವು ಗೆಲುವು ಸಾಧಿಸಿದ್ದೇವೆ" ಎಂದರು.
ಇನ್ನು ಮಳೆ-ಹಾನಿ ಬಗ್ಗೆ ಮಾತನಾಡಿದ ಅವರು, "ಈ ಬಾರಿ ರಾಜ್ಯದಲ್ಲಿ ವ್ಯಾಪಕವಾಗಿ ಅಕಾಲಿಕ ಮಳೆಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ, ಹಾವೇರಿ, ಬೆಳಗಾವಿ, ಉತ್ತರ ಕನ್ನಡದಲ್ಲಿ ಮಳೆಯಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಕೇಳಿದ್ದೇನೆ. ಭತ್ತ, ಮೆಕ್ಕೆಜೋಳ ಸೇರಿದಂತೆ ಬೆಳೆಹಾನಿಯಾಗಿದ್ದು ಈ ಬಗ್ಗೆ ಮಾಹಿತಿ ಪಡೆದುಕೊಂಡು ಪರಿಹಾರ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.